ಬೆಂಗಳೂರು: ಬಿಗ್ ಬಾಸ್ ಮನೆಯ ಟಿ ಆರ್ ಪಿ ಸುಲ್ತಾನ ನಟ ಹುಚ್ಚ ವೆಂಕಟ್ ಮತ್ತೆ ಸುದ್ದಿಯಲ್ಲಿದ್ದಾರೆ. ಈಗ ಹುಚ್ಚ ವೆಂಕಟ್ ಸುದ್ದಿಯಲ್ಲಿರುವುದು ಖಾಸಗಿ ಬದುಕಿನ ಕಾರಣಕ್ಕಾಗಿ.
ಹೌದು, ಹುಚ್ಚ ವೆಂಕಟ್ ಪತ್ನಿಯಿಂದ ವಿಚ್ಛೇದನ ಕೊಡಿಸಿ ಎಂದು ಬೆಂಗಳೂರಿನ ಸಿದ್ದಯ್ಯ ರಸ್ತೆಯಲ್ಲಿರುವ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ವಕೀಲರೊಂದಿಗೆ ನ್ಯಾಯಾಲಯಕ್ಕೆ ಆಗಮಿಸಿದ ವೆಂಕಟ್, ಹಲವು ವರ್ಷಗಳಿಂದ ಪತ್ನಿ ರೇಷ್ಮಾ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಹಾಗಾಗಿ ವಿಚ್ಛೇದನ ನೀಡಬೇಕು ಎಂದು ಮನವಿ ಮಾಡಿದ್ದಾರೆ.
2007ರ ಜನವರಿ 3 ರಂದು ಸಂಪಂಗಿರಾಮನಗರದ ಬನಶಂಕರಿ ದೇವಾಲಯದಲ್ಲಿ ವೆಂಕಟ್ ಅವರು ರೇಷ್ಮಾರನ್ನು ವಿವಾಹವಾಗಿದ್ದರು. ದೊಮ್ಮಲೂರಿನ ನೋಂದಣಿ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಿಕೊಂಡಿದ್ದರು. ಈ ನಡುವೆ ದಂಪತಿ ಮಧ್ಯೆ ವೈಮನಸು ಮೂಡಿ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.