ಮನೋರಂಜನೆ

ಬಾಹುಬಲಿ-2 ಚಿತ್ರಕ್ಕಾಗಿ 150 ಕೆಜಿಗೆ ತೂಕ ಹೆಚ್ಚಿಸಿಕೊಂಡ ಪ್ರಭಾಸ್

Pinterest LinkedIn Tumblr

prabhas

ಮುಂಬಯಿ: ಬಾಹುಬಲಿ ಚಿತ್ರದ ಹ್ಯಾಂಡ್ಸಮ್ ಹೀರೋ ಪ್ರಭಾಸ್ ನಿರ್ದೇಶಕ ರಾಜಮೌಳಿ ಅಣತಿಯ ಮೇರೆಗೆ ತಮ್ಮ ದೇಹದ ತೂಕ ಹೆಚ್ಚಿಸಿಕೊಂಡಿದ್ದಾರಂತೆ.

6 ಅಡಿ 2 ಇಂಚು ಉದ್ದವಿರುವ ಪ್ರಭಾಸ್ ಬಾಹುಬಲಿ ಪ್ರಾರ್ಟ್ -2 ಚಿತ್ರಕ್ಕಾಗಿ ತಮ್ಮ ದೇಹವನ್ನು ಮತ್ತಷ್ಟು ದಂಡಿಸಿ, ಇನ್ನಷ್ಟು ಸುಂದರಗೊಳಿಸಿಕೊಂಡಿದ್ದಾರೆ. ಬಾಹುಬಲಿ ಭಾಗ-1 ರಲ್ಲಿ ಶಿವುಡು ಮತ್ತು ಮಹೇಂದ್ರ ಬಾಹುಬಲಿಯಾಗಿ ನಟಿಸಿದ್ದ ಪ್ರಭಾಸ್ ಬಾಹುಬಲಿ ಭಾಗ 2ರಲ್ಲಿ ಅಮರೇಂದ್ರ ಬಾಹುಬಲಿಯಾಗಿ ಅಭಿನಯಿಸಲಿದ್ದಾರೆ.

ಈ ಚಿತ್ರಕ್ಕಾಗಿ ಪ್ರಭಾಸ್ ಸುಮಾರು 150 ಕೆಜಿಗೆ ತಮ್ಮ ತೂಕ ಹೆಚ್ಚಿಸಿಕೊಂಡಿದ್ದಾರೆ. ಬಾಹುಬಲಿ ಮೊದಲ ಭಾಗದಲ್ಲಿ ಶಿವುಡು ಪಾತ್ರದಲ್ಲಿ ಅಭಿನಯಿಸಿದ್ದ ಪ್ರಭಾಸ್ ಚಿತ್ರದಲ್ಲಿ ಬೃಹತ್ ಗಾತ್ರದ ಶಿವಲಿಂಗ ಎತ್ತುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದರು.

Write A Comment