ಮನೋರಂಜನೆ

ದೇವಾಲಯದಲ್ಲಿ ಕಾಂಡೋಮ್ ಬಳಕೆ: ಸನ್ನಿ ಲಿಯೋನ್ ವಿರುದ್ಧ ಕೇಸ್

Pinterest LinkedIn Tumblr

Sunny Leone

ನವದೆಹಲಿ: ನಟಿ ಸನ್ನಿಲಿಯೋನ್ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. ಆಕೆಯ ವಿರುದ್ಧ ದೂರು, ಪ್ರತಿಭಟನೆ ನಡೆಯುವುದು ಹೊಸತೇನಲ್ಲ. ಆದರೆ ಈ ಬಾರಿ ಸನ್ನಿ ಲಿಯೋನ್ ಜೊತೆಗೆ ಸಹ ಕಲಾವಿದರ ವಿರುದ್ಧ ಕೇಸ್ ಬುಕ್ ಮಾಡಲಾಗಿದೆ.

ಇತ್ತೀಚೆಗೆ ಬಿಡುಗಡೆಯಾದ ಮಸ್ತಿಜಾದೆ ಸಿನಿಮಾದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಸನ್ನಿವೇಶಗಳಿವೆ ಎಂದು ಆರೋಪಿಸಿ ನಟಿ ಸನ್ನಿ ಲಿಯೋನ್ ಹಾಗೂ ವೀರ್ ದಾಸ್ ಮತ್ತು ಚಿತ್ರ ನಿರ್ದೇಶಕ ಮಿಲಾಪ್ ಜಾವೇರಿ ವಿರುದ್ಧ ದೆಹಲಿಯ ಆದರ್ಶ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.

ದೇವಾಲಯದಲ್ಲಿ ಕಾಂಡೋಮ್ ಬಳಕೆ ಮಾಡುವ ಕುರಿತಂತೆ ಅಸಭ್ಯವಾಗಿ ಚಿತ್ರಿಸಲಾಗಿದ್ದು, ಇದರಿಂದ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ಆರೋಪಿಸಲಾಗಿದೆ. ದೂರು ನೀಡಿದವರು ಯಾರು ಎಂಬುದು ಇದುವರೆಗೂ ತಿಳಿದು ಬಂದಿಲ್ಲ. ಸಿನಿಮಾ ಬಿಡುಗಡೆಯಾದ ಎರಡು ವಾರಗಳ ಬಳಿಕ ಕೇಸು ದಾಖಲಾಗಿದೆ.

Write A Comment