ಮನೋರಂಜನೆ

Samsung Galaxy S7 ಮತ್ತು S7 Edgeನ ಸೋರಿಕೆಯಾದ ಚಿತ್ರಗಳು

Pinterest LinkedIn Tumblr

samsungs7_1

ಹಲವಾರು ಮೊಬೈಲ್ ಕಂಪೆನಿಗಳು ತಮ್ಮ 2016ನೇ ಸಾಲಿನ ಹೊಸ ಮೊಬೈಲ್ ಮಾಡೆಲ್ಗಳನ್ನು ಬಿಡುಗಡೆಗೊಳಿಸುವ ತವಕದಲ್ಲಿರುವಾಗ, ಮೊಬೈಲ್ ತಯಾರಕರಲ್ಲಿ ಪ್ರತಿಷ್ಟಿತ ಕಂಪೆನಿಯಾದ ಸ್ಯಾಮ್‌ಸಂಗ್ ನ ಮುಂಬರುವ Galaxy S7 ಮತ್ತು S7 Edge ಮಾದರಿಗಳ ಸೋರಿಕೆಯಾದ ಚಿತ್ರಗಳು ನಮಗೆ ಲಭ್ಯವಾಗಿವೆ.

samsung_s72

ಮೊದಲ ಚಿತ್ರ ವಿಯೆಟ್ನಾಮೀಸ್ ವೆಬ್ಸೈಟ್ reviewdao.vn ನಲ್ಲಿ ಆವರಿಸಿತು. ಇವರು ಗ್ಯಾಲಕ್ಸಿ S7 ತಮ್ಮ ಕೈಗಳಿಂದ ಪರಿಶೀಲಿಸಿದ್ದಾರೆ ಎಂದು ಪ್ರತಿಪಾದಿಸುತ್ತಿದ್ದಾರೆ. ಈ ಚಿತ್ರವು ಹಿಂಬದಿಯಲ್ಲಿನ ವಿಶಿಷ್ಟ ತಿರುವನ್ನು ತೋರಿಸುತ್ತದೆ. ಕ್ಯಾಮೆರಾದ ವಿನ್ಯಾಸವನ್ನು ಮತ್ತು ತೆಳುವಾದ ಮಧ್ಯ ಚೌಕಟ್ಟು ಸಹಾ ತಾವು ನೋಡಬಹುದು.

ಅದೇ ಮೂಲ S7 ಬಗ್ಗೆ ಕೆಲವು ವಿವರಗಳನ್ನು ತಿಳಿಸುತ್ತದೆ. ಅವರ ಪ್ರಕಾರ S7 ಮೊಬೈಲ್ Exynos 8890 ಮತ್ತು Qualcomm Snapdragon 820 ಎಂಬ ಎರಡು ಪ್ರಾಸೇಸರ್ ಆವ್ರತ್ತಿಯಲ್ಲಿ ಬಿಡುಗಡೆಯಾಗಲಿದೆ. SD-820 ಆವ್ರತ್ತಿಯನ್ನು ಚೀನಾ ಮತ್ತು ಅಮೇರಿಕದಲ್ಲಿ ಮಾರಾಟಮಾಡಲು ಆಯೋಜಿಸಲಾಗಿದೆ. ಆಶ್ಚರ್ಯಕರವಾಗಿ, ಅವರು SD 820 ಚಾಲಿತ S7 ಎರಡರಲ್ಲಿ ಉತ್ತಮ ಪ್ರದರ್ಶಕ, ಆದರೆ Exynos 8890 ಆವ್ರತಿಯು CPU ಮತ್ತು GPU ಕಾರ್ಯ ನಿರ್ವಹಣೆಯಲ್ಲಿ 15 ಶೇಕಡಾ ಹೆಚ್ಚು ಸಾಮರ್ತ್ಯವನ್ನು ಹೊಂದಿದೆ ಎಂದು ಬಿಂಬಿಸಿದ್ದಾರೆ. ಆದರೆ ಇದನ್ನು ಅಧೀಕ್ರತ ಮಾಹಿತಿ ಲಭ್ಯವಾಗುವವರೆಗೆ ಪರಿಗಣಿಸುವಂತಿಲ್ಲ.

ಇದಲ್ಲದೆ, ಅದೇ ಮೂಲದ ಪ್ರಕಾರ S7 ಬ್ಯಾಟರಿಯು Note 5 ಬ್ಯಾಟರಿಗಿಂತ ಹೆಚ್ಚಿನ ಸಾಮರ್ತ್ಯವನ್ನು ಹೊಂದಿದೆ. ಇದನ್ನು 0% ದಿಂದ 80% ವರೆಗೆ ಕೇವಲ 30 ನಿಮಿಷಗಳಲ್ಲಿ ತ್ವರಿತ ಗತಿಯಲ್ಲಿ ಚಾರ್ಜ್ ಮಾಡಬಹುದು. ಅವರ ಪ್ರಕಾರ ಮೊಬೈಲ್ ನ ಹೊರಬದಿಯ ಲೋಹದ ಫ್ರೇಮ್ ಅಲ್ಯೂಮಿನಿಯಮ್ ಬದಲಾಗಿ ಮ್ಯಾಗ್ನೀಸಿಯಮ್ ಬಳಸಿ ತಯಾರಿಸಲಾಗಿದೆ.

samsung_s73

ಎರಡನೇ ಚಿತ್ರವು ನಮಗೆ ಚೀನಾದ ಸಾಮಾಜಿಕ ಜಾಲತಾಣವಾದ Weiboನ ಒಬ್ಬ ಬಳಕೆದಾರನಿಂದ ಲಭ್ಯವಾಗಿದೆ. ಈ ಚಿತ್ರದಲ್ಲಿರುವ ಸ್ಯಾಮ್‌ಸಂಗ್ ಗ್ಯಾಲಕ್ಸೀ S7 Edge, Antutu Benchmarkನಲ್ಲಿ 134,704 ಅಂಕಿಯನ್ನು ತೋರಿಸುತ್ತಿದೆ. ಈ ಮಾಡೆಲ್ ನ ಬಗ್ಗೆ ಇದಕಿಂತ ಹೆಚ್ಚಿನ ಮಾಹಿತಿಯು ಸಧ್ಯಕ್ಕೆ ಲಭ್ಯವಿಲ್ಲ.

He is a Software Engineer from Moodbidri currently living in Kuwait. He likes to travel and post interesting things about technology. He is the designer of Kannadigaworld.com. You may follow him on FB at fb.com/alanpaladka

Write A Comment