ಕರ್ನಾಟಕ

ತಾಂಜಿನಿಯಾ ವಿದ್ಯಾರ್ಥಿನಿ ಬಟ್ಟೆ ಹರಿದ ಸ್ಥಳಕ್ಕೆ ಡಿಜಿ ಭೇಟಿ

Pinterest LinkedIn Tumblr

om-prakashಬೆಂಗಳೂರು,ಫೆ,೪-ತಾಂಜಿನಿಯಾ ವಿದ್ಯಾರ್ಥಿನಿ ಮೇಲೆ ಹಲ್ಲೆ ಪ್ರಕರಣ ಸಂಬಂಧ ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಹಾಗೂ ನಗರ ಪೊಲೀಸ್ ಆಯುಕ್ತ ಎಸ್ ಮೇಘರಿಕ್ ಅವರು ಘಟನೆ ನಡೆದಿದ್ದ ಹೆಸರಘಟ್ಟ ಬಳಿ ಇರುವ ಗಣಪತಿಪುರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು ಎಸಿಪಿ ಮಟ್ಟದ ಅಧಿಕಾರಿಯೊಬ್ಬರನ್ನು ಪ್ರಕರಣದ ತನಿಖೆನಡೆಸಲು ಆದೇಶಿಸಿದ್ದೇವೆ.ಪ್ರಕರಣ ಸಂಬಂಧ ಈಗಾಗಲೇ ಐವರು ಆರೋಪಿಗಳನ್ನು ಬಂಧಿಸಲಾಗಿದ್ದು ಇನ್ನು ಕೆಲವರನ್ನು ಜನರನ್ನು ಬಂಧಿಸಬೇಕಿದೆ ಎಂದು ಪರಿಶೀಲನೆಯ ನಂತರ ಓಂಪ್ರಕಾಶ್ ಅವರು ತಿಳಿಸಿದರು.

ದುರ್ಘಟನೆಯ ಕುರಿತು ಸಂತ್ರಸ್ಥ ವಿದ್ಯಾರ್ಥಿನಿ ಜೊತೆ ಮಾತುಕತೆ ನಡೆಸಿದ್ದೇವೆ.ವಿದ್ಯಾರ್ಥಿನಿ ಹಲ್ಲೆ ಮಾಡಿದ ವೇಳೆ ಬಟ್ಟೆ ಹರಿದಿರುವ ಬಗ್ಗೆ ದೂರಿನಲ್ಲಿ ಉಲ್ಲೇಖಿಸಿರುವುದರಿಂದ ಆರೋಪಿಗಳ ವಿರುದ್ದ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದ್ದು ತನಿಖೆಯ ನಂತರ ರಾಜ್ಯ ಸರ್ಕಾರಕ್ಕೆ ಸಂಪೂರ್ಣ ವರದಿಯನ್ನು ಸಲ್ಲಿಸುತ್ತೇವೆ ಎಂದು ಹೇಳಿದರು.

Write A Comment