ಅಂತರಾಷ್ಟ್ರೀಯ

ಐಸಿಸ್ ನಿಂದ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ

Pinterest LinkedIn Tumblr

isiಸಿರಿಯಾ: ತನ್ನ ವಿಚಿತ್ರ ಹಿಂಸಾ ಮಾರ್ಗದಿಂದಲೇ ಜಗತ್ತಿನಾದ್ಯಂತ ಕುಖ್ಯಾತಿಯಾಗಿರುವ ಐಸಿಸ್ ಈಗ ಎಂಟು ವರ್ಷದ ಬಾಲಕಿಯ ಮೇಲೆ ಕಳೆದ ಹತ್ತು ತಿಂಗಳಿಂದ ಸತತವಾಗಿ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣ ಬೆಳಕಿಗೆ ಬಂದಿದೆ.

ಜೆರ್ಮನ ಮೂಲದ ವೈದ್ಯರೊಬ್ಬರು ಹೇಳಿರುವ ಪ್ರಕಾರ ಐಸಿಸ್ ನಿಂದ ಸುಮಾರು 8 ವರ್ಷದ ಬಾಲಕಿಯ ಮೆಲೆ ನಿರಂತರವಾಗಿ ಅತ್ಯಾಚಾರವೆಸಗಲಾಗಿತ್ತು, ಇದೇ ರೀತಿ ಅನೇಕ ಅಪ್ರಾಪ್ತ ವಯಸ್ಸಿನ ಬಾಲಕಿಯರು ಸಿರಿಯಾ ವಶದಲ್ಲಿದ್ದು, ಇವರ ಮೇಲೂ ನಿರಂತರ ಅತ್ಯಾಚಾರ ನಡೆಯುತ್ತಿದೆ ಎಂದು ಸಂತ್ರಸ್ಥೆ ವೈದ್ಯರ ಬಳಿ ಹೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಐಸಿಸ್ ಯುನಿಫಾರ್ಮ ವಶ

ಇಂದು ಬೆಳಗ್ಗೆ ಸ್ಪಾನಿಷ್ ಪೊಲೀಸರು ಸುಮಾರು 20 ಸಾವಿರಕ್ಕೂ ಅಧಿಕ ಐಸಿಸ್ ಉಗ್ರರು ಬಳಸುವ ಸಮವಸ್ತ್ರವನ್ನು ವಶಪಡಿಸಿಕೊಂಡಿದ್ದಾರೆ ಎಂದು ಸ್ಪಾನಿಶ್ ಸಚಿವಾಲಯ ತಿಳಿಸಿದೆ.

ಐಸಿಸ್ ಉಗ್ರಗಾಮಿಗಳಿಗೆ ಏಕರೂಪ ಸಮವಸ್ತ್ರವನ್ನು ಸ್ಪೈನ್ ಅಲ್ಗೆಸಿರಾಸ್ ಹಾಗೂ ವೇಲೆನ್ಸಿಯಾ ಬಂದರಿನ ಮೂಲಕ ಕಳುಹಿಸಲಾಗುತ್ತಿತ್ತು, ಈ ವೇಳೇ ಸಾಗಾಣಿಕೆ ಮಾಡುತ್ತಿದ್ದ ಕಂಟೈನರ್ ಗಳನ್ನು ಸ್ಫೈನ್ ಪಡೆಗಳು ವಶಪಡಿಕೊಂಡಿದೆ.

ಪೆಟ್ಟಿಗೆಗಳಲ್ಲಿರು ವಸ್ತ್ರಗಳನ್ನು ಮರೆಮಾಮಾಚುವ ಉದ್ದೇಶದಿಂದ ಹಾಗೂ ಪಡೆಗಳಿಗೆ ಸಂಶಯ ಬಾರದಂತೆ ನೋಡಿಕೊಳ್ಳಲು “ಸೆಕೆಂಡ್ ಹ್ಯಾಂಡ್ ಬಟ್ಟೆಗಳು” ಎಂದು ಉಲ್ಲಖಿಸಿ ಸಾಗುಸಲಾಗುತ್ತಿತ್ತು ಎನ್ನಲಾಗಿದೆ.

Write A Comment