ಬೆಂಗಳೂರು: “ಇನ್ವೆಸ್ಟ್ ಕರ್ನಾಟಕ’ ಹಿನ್ನೆಲೆಯಲ್ಲಿ ನಗರ ಕೇಂದ್ರ ಭಾಗದ ಪ್ರಮುಖ ರಸ್ತೆಗಳಿಗೆ ಮೆರುಗು ನೀಡಿರುವ ಬಿಬಿಎಂಪಿಯು ರಸ್ತೆ
ಹಾಗೂ ಅಭಿವೃದ್ಧಿ ಮಾಡುವುದಲ್ಲದೇ ರಸ್ತೆ ವಿಭಜಕ, ತಿರುವುಗಳಿಗೆ ಬಣ್ಣ ಬಳಿಯುವ ಮೂಲಕ ಸಿಂಗರಿಸಿದೆ. ಸಮಾವೇಶ ನಡೆಯುವ ಅರಮನೆ
ಮೈದಾನ ಸುತ್ತಮುತ್ತಲಿನ 36 ಪ್ರಮುಖ ರಸ್ತೆಗಳ ಡಾಂಬರೀಕರಣ, ಫುಟ್‌ಪಾತ್ ದುರಸ್ಥಿ, ರಸ್ತೆ ವಿಭಜಕಗಳನ್ನು ಸ್ವತ್ಛಗೊಳಿಸುವುದು, ರಸ್ತೆ ವಿಭಜಕ ಹಾಗೂ ತಿರುವುಗಳಿಗೆ ಬಣ್ಣ ಬಳಿಯುವುದು ಹಾಗೂ ವಿಭಜಕಗಳ ನಡುವೆ ಅಗತ್ಯವಿರುವ ಕಡೆಗಳಲ್ಲಿ ಸುಂದರ ಸಸಿಗಳನ್ನು ನೆಡಲು ಕ್ರಮ ಕೈಗೊಂಡಿದೆ. ಇದಕ್ಕಾಗಿ 36 ರಸ್ತೆಗಳಿಗೆ ಒಟ್ಟು 3.27 ಕೋಟಿ ರೂ. ಗಳನ್ನು ಪಾಲಿಕೆ ವೆಚ್ಚ ಮಾಡಿದೆ.
ರಸ್ತೆ ಹಾಗೂ ರಸ್ತೆ ವಿಭಜಕಗಳ ಮೇಲೆ ತುಂಬಿರುವ ಧೂಳು ಹಾಗೂ ಮಣ್ಣನ್ನು ತೆರವುಗೊಳಿಸಲು ಮೆಕ್ಯಾನಿಕಲ್ ಸ್ವೀಪರ್ ಬಳಕೆ ಮಾಡಲಾಗುತ್ತಿದೆ. ಮೈದಾನಕ್ಕೆ ಮೂರು ಕಡೆಯಿಂದ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಮಾಡಲಾಗಿದ್ದು, ಅದಕ್ಕೆ ಸಂಪರ್ಕಿಸುವ ಕಚ್ಚಾ ರಸ್ತೆಗಳನ್ನು
ಕೂಡ ಯಾವುದೇ ಲೋಪವಿಲ್ಲದೆ ಸರಿಪಡಿಸಲಾಗಿದೆ. ಮಣ್ಣು ತೆರವಿಗೆ 20 ಮೆಕ್ಯಾನಿಕಲ್ ಸ್ವೀಪಿಂಗ್ ಯಂತ್ರ ನಿಯೋಜಿಸಲಾಗಿದೆ. ಅಷ್ಟೇ ಅಲ್ಲದೇ
ಅರಮನೆ ಮೈದಾನ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿನ ಅನಧಿಕೃತ ಜಾಹಿರಾತು ಹಾಗೂ ಒಎಫ್ಸಿ ಕೇಬಲ್‌ಗಳನ್ನು ತೆರವುಗೊಳಿಸಲಾಗಿದೆ.
ಅಭಿವೃದ್ಧಿಗೊಂಡ ರಸ್ತೆಗಳಿವು:
ಜಯಮಹಲ್ ರಸ್ತೆ, ನಂದಿದುರ್ಗ ರಸ್ತೆ, ಬಳ್ಳಾರಿ ರಸ್ತೆ, ಸ್ಯಾಂಕಿ ರಸ್ತೆ, ರೇಸ್ ಕೋರ್ಸ್ ರಸ್ತೆ, ಲ್ಯಾವೆಲ್ಲ ರಸ್ತೆ, ಪ್ಯಾಲೇಸ್ ಕ್ರಾಸ್ ರಸ್ತೆ, ಕಬ್ಬನ್ ರಸ್ತೆ, ಸೇಂಟ್ ಜಾನ್ಸ್ ಚರ್ಚ್ ರಸ್ತೆ, ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಮಿಲ್ಲರ್ ರಸ್ತೆ, ಮಲ್ಲೇಶ್ವರ ಮುಖ್ಯ ರಸ್ತೆ, ಯಶವಂತಪುರ ಮುಖ್ಯರಸ್ತೆ, ಮಹಾಕವಿ ಕುವೆಂಪು ರಸ್ತೆ, ಎಂ.ವಿ.ಜಯರಾಮ ರಸ್ತೆ, ವಿಠuಲ ಮಲ್ಯ ರಸ್ತೆ, ಕಸ್ತೂರಬಾ ರಸ್ತೆ, ಸುರಂಜನದಾಸ್ ರಸ್ತೆ, ರಿಚ್‌ಮಂಡ್ ರಸ್ತೆ, ಇನ್‌ಫ್ಯಾಂಟ್ರಿ ರಸ್ತೆ, ಶೇಷಾದ್ರಿ ರಸ್ತೆ, μàಲ್ಡ್ ಮಾರ್ಷಲ್ ಕರಿಯಪ್ಪ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ, ಮ್ಯೂಸಿಯಂ ರಸ್ತೆ, ರೆಸಿಡೆನ್ಸಿ ರಸ್ತೆ, ಎಚ್‌ಎಎಲ್ ವಿಮಾನ ನಿಲ್ದಾಣ ರಸ್ತೆ, ಹಳೆ ಮದ್ರಾಸ್ ರಸ್ತೆ, ಡಬ್ಬಲ್ ರಸ್ತೆ, ಲಾಲ್‌ಬಾಗ್ ರಸ್ತೆ ಮತ್ತು ನೃಪತುಂಗ ರಸ್ತೆ.
-ಉದಯವಾಣಿ