ಬೆಂಗಳೂರು: ವಿವಿಧ ಅಪರಾಧ ಪ್ರಕರಣಗಳನ್ನು ಭೇದಿಸಿರುವ ಕಾಟನ್ ಪೇಟೆ ಪೊಲೀಸರು 13 ಆರೋಪಿಗಳನ್ನು ಬಂಧಿಸಿದ್ದು, 25.51 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದು ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಚರಣ್ ರೆಡ್ಡಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಮೋಜಿನ ಜೀವನ ನಡೆಸುವ ಉದ್ದೇಶಕ್ಕಾಗಿ ಸುಲಿಗೆ, ಮನೆಗಳ್ಳತನ, ಡಕಾಯಿತಿ ಮತ್ತಿತರ
ಪ್ರಕರಣಗಳಲ್ಲಿ ಭಾಗಿಯಾಗಿದ್ದ ಶರಣ್, ನಾಗೇಶ್, ಅನಿಲ್ ಎಂಬುವರನ್ನು ಬಂಧಿಸಲಾಗಿದೆ. ಈ ಆರೋಪಿಗಳು ಬ್ಯಾಡರಹಳ್ಳಿ, ಕಾಟನ್‌ಪೇಟೆ ಹಾಗೂ
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಸುತ್ತಮುತ್ತ ಒಂಟಿಯಾಗಿ ಓಡಾಡುತ್ತಿದ್ದ ಸಾರ್ವಜನಿಕರನ್ನು ಅಡ್ಡಗಟ್ಟಿ ಸುಲಿಗೆ, ಸರಗಳ್ಳತನ
ಮಾಡುತ್ತಿದ್ದರು ಎಂದು ಹೇಳಿದರು.
ವಿವಿಧ ಸ್ಥಳಗಳಲ್ಲಿ ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ಬೀಗ ಒಡೆದು ಕಳ್ಳತನ ಮತ್ತು ಪಾರ್ಕಿಂಗ್ ಮಾಡಲಾಗಿರುವ ವಾಹನಗಳನ್ನು
ಕಳವು ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದ್ದು, 5.67 ಲಕ್ಷ ರೂ. ಮೌಲ್ಯದ 227 ಗ್ರಾಂ ತೂಕದ
ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದರು.
7 ಡಕಾಯಿತರ ಬಂಧನ: ವೃದ್ಧರನ್ನು ಗುರಿಯಾಗಿಟ್ಟುಕೊಂಡು ಡಕಾಯಿತಿಗೆ ಹೊಂಚು ಹಾಕುತ್ತಿದ್ದ ಏಳು ಮಂದಿಯನ್ನು ಬಂಧಿಸಲಾಗಿದೆ. 13.70
ಲಕ್ಷ ರೂ ಮೌಲ್ಯದ ಚಿನ್ನಾಭರಣ, 90 ಸಾವಿರ ಮೌಲ್ಯದ ಬೆಳ್ಳಿ ಆಭರಣ, ಒಂದು ಟೈಟಾನ್ ಕೈಗಡಿಯಾರ, ಹಿತ್ತಾಳೆ ದೀಪದ ಕಂಬ ಹಾಗೂ 1.30 ಲಕ್ಷ ರೂ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳಾದ ಕಾಟನ್‌ಪೇಟೆಯ ವಿನೋದ್ (24), ಎಸ್‌ಜೆಪಿ ಪಾಕ್ ìನ ಪ್ರದೀಪ್ (27), ಮೇಕೆದೊಡ್ಡಿ ಹಿಂಭಾಗದ ರಂಜಿತ್ (25), ಎಚ್ ಎಎಲ್ ಕಾಲೋನಿಯ ಶರತ್‌ಚಂದ್ರ ಶೇಖರ್(33), ಬನಶಂಕರಿಯ ಕೇಶವ (39) ಜೀವನ್‌ಬಿಮಾನಗರದ ಅಭಿಜಿತ್ (30) ಹಾಗೂ ಕುರಿದೊಡ್ಡಿಯ ಮಂಜು (30) ಬಂಧಿಸಲಾಗಿದೆ.
ಜ.11 ರಂದು ಕಾಟನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಡಕಾಯಿತಿಗೆ ಹೊಂಚು ಹಾಕುತ್ತಿದ್ದರು. ಇದರ ಬಗ್ಗೆ ಮಾಹಿತಿ ಪಡೆದ ಪೊಲೀಸರು
ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಬೈಯಪ್ಪನಹಳ್ಳಿ
ಪೊಲೀಸ್ ಠಾಣೆ ವ್ಯಾಪ್ತಿಯ ಸದಾನಂದ ನಗರದಲ್ಲಿ ನಡೆಸಿದ್ದ ದರೋಡೆ ಪ್ರಕರಣ ಹಾಗೂ ನಗರದ ಹಲವು ಕಡೆ ನಡೆಸಿದ್ದ ಸುಲಿಗೆ, ಮನೆಕಳವು, ಸಾಮಾನ್ಯ ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಹೇಳಿದರು.
ವಾಹನ ಕಳ್ಳರ ಬಂಧನ: ಜೈಲಿಗೆ ಹೋಗಿ ಬಂದರೂ ತನ್ನ ಹಳೆಯ ಚಾಳಿ ಬಿಡದ ಕುರುಬರಹಳ್ಳಿಯ ಪ್ರಕಾಶ್ (28) ಹಾಗೂ ಎಸ್‌ಜೆಪಿ
ಪಾರ್ಕ್‌ನ ಪ್ರದೀಪ್ (27) ಹಾಗೂ ಆಟೋ ರಿûಾ ಕಳವು ಮಾಡಿದ್ದ ಕೋಡಿ ಚಿಕ್ಕನಹಳ್ಳಿಯ ಬಾಲು (29) ಎಂಬುವವರನ್ನು ಬಂಧಿಸಲಾಗಿದೆ.
ಈ ಹಿಂದೆ ಇವರ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದು, ಜೈಲು ವಾಸ ಅನುಭವಿಸಿದ್ದರು. ಬಿಡುಗಡೆಯಾದ ನಂತರವೂ ಕೂಡ ತಮ್ಮ ಚಾಳಿ ಮುಂದುವರಿಸಿದ್ದ ಅವರು ಸುಲಿಗೆ, ಸರಗಳ್ಳತನ ಹಾಗೂ ವಾಹನ ಕಳ್ಳತನಗಳನ್ನು ಮುಂದುವರಿಸಿದ್ದರು. ಬಂಧಿತರಿಂದ 2.54 ಲಕ್ಷ ರೂ ಮೌಲ್ಯದ
101.9 ಗ್ರಂ ತೂಕದ ಚಿನ್ನಾಭರಣ, 84 ಸಾವಿರ ಮೌಲ್ಯದ 4 ದ್ವಿಚಕ್ರ ವಾಹನ ಹಾಗೂ 49 ಸಾವಿರ ಮೌಲ್ಯದ ಒಂದು ಆಟೋವನ್ನು ವಶಪಡಿಸಿಕೊಳ್ಳಲಾಗಿದೆ. ಕಾಟನ್‌ಪೇಟೆ ಪೊಲೀಸರು ಒಟ್ಟು 25 ಪ್ರಕರಣಗಳನ್ನು ಪತ್ತೆ ಮಾಡಿದ್ದು, 25.51 ಲಕ್ಷ ರೂ.ಚಿನ್ನ, ಬೆಳ್ಳಿ ಆಭರಣ
ಮತ್ತು ದ್ವಿಚಕ್ರ, ತ್ರಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಚರಣ್ ರೆಡ್ಡಿ ತಿಳಿಸಿದರು.
-ಉದಯವಾಣಿ