ಕರ್ನಾಟಕ

ರಾಯಣ್ಣ ಪ್ರತಿಮೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಲಾರ್ಪಣೆ

Pinterest LinkedIn Tumblr

Krantiveera-Sangolli-Rayanna-ಬೆಂಗಳೂರು, ಜ.26: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ 185ನೇ ಸ್ಮರಣೋತ್ಸವ ಪ್ರಯುಕ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ನಗರದ ಮೆಜೆಸ್ಟಿಕ್‍ನಲ್ಲಿರುವ ರಾಯಣ್ಣ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಯಣ್ಣ ಅವರ ಪ್ರತಿಮೆಯ ಖಡ್ಗವನ್ನು ಕಳ್ಳತನ ಮಾಡುವ ಜನ ನಮ್ಮಲ್ಲಿದ್ದಾರೆ. ಇಂಥವರಿಗೆ ಇನ್ನಾದರೂ ಒಳ್ಳೆಯ ಬುದ್ದಿ ಬರಲಿ. ಖಡ್ಗ ಬದಲಾಯಿಸುವಂತೆ ವಾಟಾಳ್ ಹೇಳಿದ್ದಾರೆ. ಈ ಕಾರ್ಯ ಶೀಘ್ರವೇ ನೆರವೇರಲಿದೆ ಎಂದು ಭರವಸೆ ನೀಡಿದರು.

ಪ್ರತಿಮೆಯ ಬಳಿ ಸಿಸಿಟಿವಿ ಅಳವಡಿಸಲಾಗುವುದು. ಸಿಟಿ ರೈಲ್ವೆ ನಿಲ್ದಾಣಕ್ಕೆ ರಾಯಣ್ಣ ಅವರ ಹೆಸರ ಇಡಲಾಗಿದೆ. ಈ ಬಗ್ಗೆ ಶೀಘ್ರವೇ ಸಭೆಯನ್ನು ಕರೆದು ಎಲ್ಲಾ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

ಸಂಗೊಳ್ಳಿ ರಾಯಣ್ಣ ದೇಶಕ್ಕಾಗಿ ಹೋರಾಡಿದ ಪುಣ್ಯ ಪುರುಷ. ಇಂದು ಅವರ ಹುತಾತ್ಮ ದಿನವಾಗಿದೆ. ಇಂದು ಗಣರಾಜ್ಯೋತ್ಸವ ದಿನವೂ ಹೌದು. ಕಾಕತಾಳೀಯ ಎಂಬಂತೆ ಇಂದೆ ರಾಯಣ್ಣ ಅವರ ಸ್ಮರಣೆಯ ದಿನವೂ ಆಗಿದೆ. ಬ್ರಿಟಿಷರ ಕಪಿಮುಷ್ಟಿಯಿಂದ ದೇಶವನ್ನು ರಕ್ಷಿಸಲು ರಾಯಣ್ಣ ಹೋರಾಡಿದರು. ತಂತ್ರದಿಂದ ಬ್ರಿಟಿಷರನ್ನು ಸೋಲಿಸಿದರು. ಅಂತ ದೇಶ ಪ್ರೇಮಿಗೆ ಗೌರವಿಸುತ್ತಿದ್ದೇವೆ ಎಂದು ಹೇಳಿದರು.

ಈ ವೇಳೆ ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್, ಮೇಯರ್ ಮಂಜುನಾಥ ರೆಡ್ಡಿ ಮತ್ತಿತರರು ಹಾಜರಿದ್ದರು.

Write A Comment