ಮನೋರಂಜನೆ

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಗೆದ್ದ ಟೀಂ ಇಂಡಿಯಾ

Pinterest LinkedIn Tumblr

indiaಅಡಿಲೇಡ್: ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಅಮೋಘ ಜಯ ಸಾಧಿಸಿದೆ.
ಟೀಂ ಇಂಡಿಯಾ ನೀಡಿದ 189 ರನ್ ಗಳ ಬೆನ್ನಟ್ಟಿದ ಆಸ್ಟ್ರೇಲಿಯಾ 151 ರನ್ ಗಳಿಗೆ ಸರ್ವ ಪತನ ಕಂಡಿತು. ಇದರೊಂದಿಗೆ ಟೀಂ ಇಂಡಿಯಾ 37 ರನ್ ಗಳಿಂದ ಜಯ ಸಾಧಿಸಿದೆ.

ಆಸ್ಟ್ರೇಲಿಯಾ ಪರ ಪಿಂಚ್ 44, ಡೇವಿಡ್ ವಾರ್ನರ್ 17, ಸ್ಮಿತ್ 21, ಹೆಡ್ 2, ಲೇನ್ 17, ವಾಟ್ಸನ್ 12, ವಾಡೆ 5, ಫಾಲ್ಕನರ್ 10, ರಿಚರ್ಡ್ ಸನ್ 9, ಬಾಯ್ಸ್ 3 ಹಾಗೂ ಟೈಟ್ ಅಜೇಯ 1 ರನ್ ಗಳಿಸಿದ್ದಾರೆ.

ಭಾರತ ಪರ ಭುಮ್ರಾ 3, ಅಶ್ವಿನ್, ಜಡೇಜಾ ಹಾಗೂ ಹಾರ್ಧಿಕ್ ಪಾಂಡ್ಯಾ ತಲಾ 2 , ಆಶಿಶ್ ನೆಹ್ರಾ 1 ವಿಕೆಟ್ ಪಡೆದಿದ್ದಾರೆ.

ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 3 ವಿಕೆಟ್ ನಷ್ಟಕ್ಕೆ 188 ರನ್ ಗಳನ್ನು ಸಿಡಿಸಿದ್ದು, ಆಸ್ಟ್ರೇಲಿಯಾಗೆ ಗೆಲ್ಲಲು 189 ರನ್ ಗಳ ಗುರಿ ನೀಡಿತ್ತು.

ಅಡಿಲೇಡ್ ನಲ್ಲಿ ನಡೆದ ಟಾಸ್ ಗೆದ್ದ ಆಸ್ಟ್ರೇಲಿಯಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಪರ ಆಟಗಾರರ ಉತ್ತಮ ಬ್ಯಾಟಿಂಗ್ ನಿಂದಾಗಿ 188 ರನ್ ಕಲೆ ಹಾಕಿತು. ಅಜೇಯ 90ರನ್ ಗಳಿಸಿದ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಚೊಚ್ಚಲ ಶತಕ ಗಳಿಸುವ ಅವಕಾಶ ಕಳೆದುಕೊಂಡರು.

ಭಾರತ ತಂಡ ಆರಂಭಿಕ ರೋಹಿತ್ ಶರ್ಮ 31, ಶಿಖರ್ ಧವನ್ 5 ಹಾಗೂ ಸುರೇಶ್ ರೈನಾ 41 ರನ್ ಗಳಿಗೆ ಔಟಾದರು. ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದ ವಿರಾಟ್ ಕೊಹ್ಲಿ (55ಎಸೆತ, 90*ರನ್, 9ಬೌಂಡರಿ, 2ಸಿಕ್ಸರ್) ಅವರ ಅತ್ಯಾಕರ್ಷಕ ಆಟ ಪ್ರದರ್ಶಿಸಿದರು. ಸುರೇಶ್ ರೈನಾ ಬಳಿಕ ಬಂದ ಧೋನಿ ಅಜೇಯ 11 ರನ್ ಗಳಿಸಿದರು.
ಆಸ್ಟ್ರೇಲಿಯಾ ಪರ ವಾಟ್ಸನ್ 2 ಹಾಗೂ ಫಾಲ್ಕನರ್ 1ವಿಕೆಟ್ ಪಡೆದಿದ್ದಾರೆ.

Write A Comment