ಪಣಜಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹತ್ಯೆ ಮಾಡುವುದಾಗಿ ಬೆದರಿಕೆ ಪತ್ರ ಸಂಬಂಧ ಗೋವಾ ಪೊಲೀಸರು ಸಿರಿಯಾ ಮೂಲದ ವ್ಯಕ್ತಿಯೊರ್ವನನ್ನು ಬಂಧಿಸಿದ್ದಾರೆ.
ಬೆದರಿಕೆ ಪತ್ರ ಸಂಬಂಧ ಕಳೆದ ರಾತ್ರಿ ಸಿರಿಯಾ ಮೂಲದ ವ್ಯಕ್ತಿಯೊರ್ವನನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ ಎಂದು ಗೋವಾ ಮುಖ್ಯಮಂತ್ರಿ, ಗೃಹ ಖಾತೆ ಹೊಂದಿರುವ ಲಕ್ಷ್ಮಿಕಾಂತ್ ಪರ್ಸೇಕರ್ ಅವರು ಹೇಳಿದ್ದಾರೆ.
ಯೆಮೆನ್ ಹಾಗೂ ನೈಜಿರಿಯಾ ಮೂಲದವರನ್ನು ಕ್ಯಾಸಿನೋ ಮತ್ತು ಬಾಗ್ ಪ್ರದೇಶದಲ್ಲಿ ಬಂಧಿಸಿರುವ ಗೋವಾ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ(ಇಸಿಸ್) ಉಗ್ರ ಸಂಘಟನೆಯ ಮುದ್ರೆ ಹೊಂದಿದ್ದ ಅನಾಮಿಕ ಪತ್ರವೊಂದು ಜನವರಿ 13 ರಂದು ಗೋವಾ ಪೊಲೀಸರ ಕೈಸೇರಿತ್ತು.