ಕರ್ನಾಟಕ

ಕಾರು ಪಲ್ಟಿ, ಹಠಾತ್ ಹೊತ್ತಿಕೊಂಡ ಬೆಂಕಿಯಲ್ಲಿ ಚಾಲಕ ಸಜೀವ ದಹನ

Pinterest LinkedIn Tumblr

Gadagಗದಗ: ಚಾಲಕನ ನಿಯಂತ್ರಣ ತಪ್ಪಿದ ಕಾರು ಪಲ್ಟಿಯಾಗಿ ಬೆಂಕಿಹೊತ್ತಿಕೊಂಡ ಪರಿಣಾಮ ಚಾಲಕ ಸಜೀವ ದಹನವಾದ ಘಟನೆ ಸೋಮವಾರ ಮಧ್ಯಾಹ್ನ ಗದಗ-ರೋಣ ಮಾರ್ಗದ ಗದ್ದಿಹಳ್ಳ ಸೇತುವೆ ಬಳಿ ನಡೆದಿದೆ. ಸಂಗನ ಗೌಡ ಅಂದಾನ ಗೌಡ (47) ಬೆಂಕಿಯಲ್ಲಿ ಸಜೀಹ ದಹನವಾದ ದುರ್ದೈವಿಯಾಗಿದ್ದಾರೆ.

ಸಂಗನ ಗೌಡ ಅವರು ರೋಣದಿಂದ ಗದಗಕ್ಕೆ ಮಾರುತಿ 800 ಕಾರಿನಲ್ಲಿ ಬರುವಾಗ ಈ ಘಟನೆ ಸಂಭವಿಸಿದೆ. ಮೃತರು ರೋಣದ ಜಗಳೂರು ಗ್ರಾಮದವರಾಗಿದ್ದಾರೆ. ಘಟನೆಯಲ್ಲಿ ಕಾರು ಸಂಪೂರ್ಣ ಭಸ್ಮವಾಗಿದೆ. ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

Write A Comment