ಬೆಂಗಳೂರು,ಜ.೨೨-ನಗರದ ಪ್ರತಿಷ್ಟಿತ ಮೌಂಟ್ ಕಾರ್ಮೆಲ್ ಕಾಲೇಜಿನ ೯೦೦ಕ್ಕೂ ಹೆಚ್ಚು ವಿದ್ಯಾರ್ಥಿನಿಯರು “ಟ್ವಿಸ್” ಹಣ್ಣಿನ ರಸದ ಬಾಟಲ್ಗಳ ಮುಚ್ಚಳ ತೆರೆಯುವ ಮೂಲಕ ನೂತನ ಗಿನ್ನಿಸ್ ವಿಶ್ವದಾಖಲೆ ಸೃಷ್ಟಿಸಿದರು.
ಬೆಳಿಗ್ಗೆ ೧೦ ಗಂಟೆಯಿಂದಲೇ ಉತ್ಸಾಹದಿಂದಲೇ ಭಾಗವಿಸಿದ ವಿದ್ಯಾರ್ಥಿನಿಯರು ಈ ಹಿಂದೆ ಲಾಟ್ವಿಯಾದ ಲಿಗಟ್ನೆಯಲ್ಲಿ ಲಿಟೆಡ್ ಸಿಡೊಗ್ರುಪಾ ೨೦೧೪ರ ಆಗಸ್ಟ್ ೨ ರಂದು ೬೮೯ ಮಂದಿ ಮಾಡಿದ್ದ ದಾಖಲೆಯನ್ನು ಅಳಿಸಿ ಹಾಕಿ ಹೊಸ ವಿಶ್ವದಾಖಲೆಗೆ ಪಾತ್ರರಾದರು.
ಗಿನ್ನಿಸ್ ವಿಶ್ವದಾಖಲೆಯ ಪ್ರತಿನಿಧಿಗಳು, ಮಲ್ಯ ಆಸ್ಪತ್ರೆಯ ಅಧ್ಯಕ್ಷ ಡಾ.ಜೈಕರ್ ಶೆಟ್ಟಿ, ಮೌಂಟ್ ಕಾರ್ಮೆಲ್ ಕಾಲೇಜಿನ ಪ್ರಾಂಶುಪಾಲುರು, ಅಧ್ಯಾಪಕರು,ವಿದ್ಯಾರ್ಥಿ ಸಂಘಟನೆಯ ಪ್ರತಿನಿಧೀಗಳೂ ಸೇರಿದಂತೆ ಅನೇಕರು ನೂತನ ವಿಶ್ವದಾಖಲೆಗೆ ಸಾಕ್ಷಿಯಾದರು.
ಬೆಳಿಗ್ಗೆ ೧೧ ಗಂಟೆ ೧೦ ನಿಮಿಷಕ್ಕೆ ೯೦೦ ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಆಯೋಜಕರ ಸೂಚನೆ ಮೇರೆಗೆ ಒಮ್ಮೆಲೆ ಬಾಟಲಿಯ ಮುಚ್ಚಳ ತೆರೆಯುತ್ತಿದ್ದಂತೆ ವಿದ್ಯಾರ್ಥಿನಿಯರು ಒಂದೆಡೆಡ ಕುಣಿದು ಕುಪ್ಪಳಿಸಿದರೆ ಮತ್ತೊಂದೆಡೆ ಹಳೆಯ ದಾಖಲೆ ಮುರಿದು ನೂತನ ವಿಶ್ವ ದಾಖಲೆಯನ್ನು ನಿರ್ಮಿಸಿರುವ ಬಗ್ಗೆ ಅತಿಥಿಗಳು ಪ್ರಕಟಿಸಿದರು.
ನೂತನ ವಿಶ್ವದಾಖಲೆಯನ್ನು ಮೌಲೀಕರಿಸಿ ಒಂದು ವಾರದೊಳಗೆ ಪ್ರಮಾಣ ಪತ್ರ ಸಿಗಲಿದೆ.”ಟ್ವಿಸ್”ಬಹುಸ್ವಾದದ ಹಣ್ಣಿನ ರಸದ ಕಂಪನಿ ಈ ವಿಶ್ವದಾಖಲೆ ಕಾರ್ಯಕ್ರಮ ಆಯೋಜಿಸಿತ್ತು. ಟ್ವಿಸ್ ಟ್ರಿಂಕ್ಸ್ ಇಂಡಿಯಾ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ನಿತಿನ್ ಎಸ್. ಮೆನನ್ ಮತ್ತು ಅಧ್ಯಕ್ಷ ಪ್ರೇಮ್ ಚಂದರ್ ರಾಜನ್ ನೂತನ ವಿಶ್ವದಾಖಲೆಯ ಸಂಭ್ರಮದ ಕ್ಷಣಗಳ ಉಸ್ತುವಾರಿ ವಹಿಸಿದ್ದರು.
ವಿಶ್ವದಾಖಲೆಯ ಕಾರ್ಯಕ್ರಮದಲ್ಲಿ ಭಾಗಿಯಾಗಲು ಮೌಂಟ್ ಕಾರ್ಮೆಲ್ ಕಾಲೇಜಿನ ವಿದ್ಯಾರ್ಥಿನಿಯರು ಬೆಳೆಗ್ಗೆಯಿಂದಲೇ ಟ್ವಿಸ್ ಕಂಪನಿಯ ಟೀ ಶರ್ಟ್ ಮತ್ತು ಟೋಪಿ ಧರಿಸಿ ಕೈಯಲ್ಲಿ ಬಾಟಲ್ ಹಿಡಿದು ಅದನ್ನು ತೆರೆಯಲು ಆತುರದಿಂದ ಕಾದುಕುಳಿತಿದ್ದರು.ವಿದ್ಯಾರ್ಥಿಗಳ ಸಂಖ್ಯೆ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದ್ದಂತೆ ಸುಮಾರು ೮೫೦ ವಿದ್ಯಾರ್ಥಿನಿಯರನ್ನು ನಿರೀಕ್ಷೆ ಮಾಡಿದ್ದ ಆಯೋಜಕರಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ಭಾಗವಹಿಸಿದ ಹಿನ್ನೆಲೆಯಲ್ಲಿ ಬರೀ ೯೦೦ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಸೀಮಿತ ಗೋಳಿಸಿದರು.
ನೂತನ ವಿಶ್ವದಾಖಲೆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂಬ ಅನೇಕ ವಿದ್ಯಾರ್ಥಿಗಳ ಆಸೆ ಈಡೇರಲಿಲ್ಲ.
ಕರ್ನಾಟಕ