ಹೊಸದಿಲ್ಲಿ: ಪಠಾಣ್‌ಕೋಟ್ ವಾಯುನೆಲೆಯ ಮೇಲೆ ಉಗ್ರ ದಾಳಿಯ ಬಳಿಕ ಐಟಿಬಿಪಿ ಪೊಲೀಸ್ ಒಬ್ಬರ ಕಾರು ನಾಪತ್ತೆಯಾಗಿತ್ತು.ಇದೀಗ ಇನ್ನೊಂದು ಆಲ್ಟೋ ಕಾರು ನಿಗೂಢವಾಗಿ ನಾಪತ್ತೆಯಾಗಿರುವುದು ಭದ್ರತಾ ಸಿಬಂದಿಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಗಣರಾಜ್ಯೋತ್ಸವ ಸಂದರ್ಭ ಉಗ್ರರು ದಾಳಿ ನಡೆಸುವ ಸಾಧ್ಯತೆಗಳಿರುವ ಹಿನ್ನಲೆಯಲ್ಲಿ ಕಾರು ನಾಪತ್ತೆಯಾಗಿರುವುದು ಇದೀಗ ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.
ಕಾರನ್ನು ಉಗ್ರರು ಅಪಹರಿಸಿರುವ ಶಂಕೆ ವ್ಯಕ್ತವಾಗಿದ್ದು, ಜನವರಿ 17 ರಂದು ಕಾರನ್ನು ಮೂವರು ಅಪರಿಚಿತರು ಅಪಹರಿಸಿದ್ದರು.ಕಾರು ಚಾಲಕ ವಿಜಯ್ ಕುಮಾರ್ ಅವರ ಶವ ಕಾಂಗ್ರಾ ಜಿಲ್ಲೆಯಲ್ಲಿ ಪತ್ತೆಯಾಗಿತ್ತು.
ಉಗ್ರರ ಸಂಭಾವ್ಯ ದಾಳಿ ನಡೆಯುವ ಸಾಧ್ಯತೆಗಳಿರುವ ಹಿನ್ನಲೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯ ಪ್ರಮುಖ ಸ್ಥಳಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.ಉತ್ತರ ಭಾರತದ ಪ್ರಮುಖ ಸ್ಥಳಗಳಲ್ಲಿ ವ್ಯಾಪಕ ಕಟ್ಟೆಚ್ಚರ ವಹಿಸಲಾಗದೆ.
-ಉದಯವಾಣಿ