ಮೈಸೂರು, ಜ.22- ರಸ್ತೆ ಅಪಘಾತಗಳಿಂದ 800ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ಐಜಿಪಿ ಬಿ.ಕೆ.ಸಿಂಗ್ ತಿಳಿಸಿದರು. ನಗರದ ಮಿರ್ಜಾ ರಸ್ತೆಯ ಟ್ರಾಫಿಕ್ ಪಾರ್ಕ್‌ನಲ್ಲಿ ಇಂದು ನಡೆದ 27ನೆ ರಸ್ತೆ ಸುರಕ್ಷತಾ ಸಪ್ತಾಹದ ಸಮಾರೋಪ ಸಮಾರಂಭವನ್ನು ಚಿತ್ರ ಬಿಡಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಮೃತಪಟ್ಟವರ ಪೈಕಿ ದ್ವಿಚಕ್ರ ವಾಹನ ಸವಾರರೇ ಹೆಚ್ಚು. ಅದರಲ್ಲಿ ಹೆಲ್ಮೆಟ್ ಧರಿಸದೆ ಪ್ರಯಾಣಿಸಿದವರೇ ಹೆಚ್ಚು ಮಂದಿ ಇದ್ದರು ಎಂದರು. ಹಾಗಾಗಿ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಬೇಕು ಎಂದು ತಿಳಿಸಿದರು. ಅಪಘಾತ ನಡೆದಲ್ಲಿ ಶೇ.50ರಷ್ಟು ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳು ಸಾವನ್ನಪ್ಪುತ್ತಾರೆ.
ಇನ್ನುಳಿದ ಶೇ.50ರಷ್ಟು ಮಂದಿ ಭಾರಿ ವಾಹನಗಳಲ್ಲಿ ಕಾರು, ಬಸ್, ಲಾರಿಗಳು ಹಿಂಬಾಲಿಸುವವರು ಸಾವನ್ನಪ್ಪುತ್ತಿದ್ದಾರೆ. ಪ್ರತಿಯೊಬ್ಬರು ರಸ್ತೆ ನಿಯಮ ಪಾಲಿಸದೆ ಅಪಘಾತ ತಪ್ಪಿಸಬಹುದೆಂದರು.
ಶಾಸಕ ವಾಸು, ಮೈಸೂರು ಉಪಮೇಯರ್ ವನಿತಾ ಪ್ರಸನ್ನ, ನಗರ ಪೊಲೀಸ್ ಆಯುಕ್ತ ದಯಾನಂದ್, ಕೆಎಸ್‌ಆರ್‌ಪಿ ಕಮಾಂಡೆಂಟ್ ರಾಮ್‌ದಾಸಗೌಡ, ಡಿಸಿಪಿ ಮಿರ್ಜಿ ಉಪಸ್ಥಿತರಿದ್ದರು.