ಅಂತರಾಷ್ಟ್ರೀಯ

ಮೊಗಡಿಶುವಿನಲ್ಲಿ ಉಗ್ರರ ಆತ್ಮಾಹುತಿ ದಾಳಿ, 20 ಸಾವು

Pinterest LinkedIn Tumblr

Somalia-attackಮೊಗಡಿಶು: ಸೋಮಾಲಿಯಾದ ರಾಜಧಾನಿ ಮೊಗಡಿಶುವಿನಲ್ಲಿ ಇಸ್ಲಾಮಿಸ್ಟ್ ಅಲ್-ಶಬಾಬ್ ಉಗ್ರರು ದಾಳಿ ನಡೆಸಿದ್ದು ಕನಿಷ್ಠ 20 ಮಂದಿ ಮೃತರಾಗಿದ್ದಾರೆ. ಮೊಗಡಿಶು ಸಮುದ್ರ ತೀರದ ಪ್ರತಿಷ್ಠಿತ ರೆಸ್ಟೋರೆಂಟ್​ಗೆ ನುಗ್ಗಿದ ಆತ್ಮಾಹುತಿ ಬಾಂಬ್ ದಾಳಿಕೋರರು ಸ್ವಯಂ ಸ್ಪೋಟಿಸಿಕೊಂಡಿದ್ದಾರೆ.

ಗುರುವಾರ ಸಂಜೆ ರೆಸ್ಟೋರೆಂಟ್​ಗೆ ಆಗಮಿಸಿದ ಬಂಧೂಕುದಾರಿ ಉಗ್ರರು ತಮ್ಮನ್ನು ಸ್ಪೋಟಿಸಿಕೊಂಡು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 20 ಮಂದಿಯನ್ನು ಹತ್ಯೆಗೈದಿದ್ದಾರೆ. ಇದು ಇಸ್ಲಾಮಿಸ್ಟ್ ಶಬಾಬ್ ಉಗ್ರರ ಕೃತ್ಯ ಎಂದು ಸೋಮಾಲಿಯಾದ ಪೊಲೀಸ್ ಅಧಿಕಾರಿ ಮೊಹಮ್ಮದ್ ಅಬ್ದಿರ್ ರೆಹಮಾನ್ ತಿಳಿಸಿದ್ದಾರೆ.

ಮೃತರಲ್ಲಿ ನಾಲ್ವರು ಬಂದೂಕುಧಾರಿ ಉಗ್ರರು ಕೂಡ ಸೇರಿದ್ದಾರೆ. ಒಬ್ಬನನ್ನು ಸೆರೆ ಹಿಡಿಯಲಾಗಿದೆ. ಅಲ್ ಖೈದಾ ಜತೆ ನಂಟು ಹೊಂದಿರುವ ಶೆಬಾಬ್ ಉಗ್ರ ಸಂಘಟನೆ ಈ ದಾಳಿಯ ಹೊಣೆ ಹೊತ್ತುಕೊಂಡಿದೆ..

Write A Comment