ಕರ್ನಾಟಕ

ಕರ್ನಾಟಕದ 1656ಕಿ.ಮೀ ರಾಜ್ಯ ಹೆದ್ದಾರಿಯನ್ನು ರಾಷ್ಟೀಯ ಹೆದ್ದಾರಿಯನ್ನಾಗಿ ಘೋಷಿಸಿದ ಕೇಂದ್ರ

Pinterest LinkedIn Tumblr

roadಬೆಂಗಳೂರು,ಜ.14-ಕೇಂದ್ರ ಸರ್ಕಾರ ಕರ್ನಾಟಕದ 1656ಕಿ.ಮೀ ರಾಜ್ಯ ಹೆದ್ದಾರಿಯನ್ನು ರಾಷ್ಟೀಯ ಹೆದ್ದಾರಿಯನ್ನಾಗಿ ಘೋಷಿಸಿದೆ. ಈ ಮೂಲಕ ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ಉದ್ದ 8088.29 ಕಿ.ಮೀ. ಆಗಿದೆ ಎಂದು ಲೋಕೋಪಯೋಗಿ ಸಚಿವ ಹೆಚ್.ಸಿ.ಮಹದೇವಪ್ಪ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಸಿದ್ದಾಪುರವನ್ನು ಸಂಪರ್ಕಿಸುವ ಯಲ್ಲಾಪುರ ಜಂಕ್ಷನ್‌ನಿಂದ ತಾಳಗುಪ್ಪ ಮತ್ತು ಭಟ್ಕಳ ನಡುವಿನ 219ಕಿ.ಮೀ., ರಾ.ಹೆ.48ರಿಂದ 167ನ್ನು ಸಂಪರ್ಕಿಸುವ ಬಾಗಲಕೋಟೆಯಿಂದ ರಾಯಚೂರು ನಡುವಿನ 336 ಕಿ.ಮೀ., ತುಮಕೂರು, ಕೊರಟಗೆರೆ, ಪಾವಗಡ, ಕಲ್ಯಾಣದುರ್ಗದಿಂದ ಆಂಧ್ರಪ್ರದೇಶದ ವೇತರಾಲ ನಡುವಿನ 95 ಕಿ.ಮೀ., ರಾಮನಗರದಿಂದ ಸದಾಶಿವ ಘಡ ನಡುವಿನ 118ಕಿ.ಮೀ., ದಾವಣಗೆರೆ-ಚನ್ನಗಿರಿ ನಡುವಿನ 60ಕಿ.ಮೀ., ಚಿತ್ರದುರ್ಗ, ಪಾವಗಡದಿಂದ ಪೆನಕೊಂಡ ನಡುವಿನ 120ಕಿ.ಮೀ.,

ಗುಲ್ಬರ್ಗದಿಂದ ಉಮ್ನೆರ್ಗ ನಡುವಿನ 64ಕಿ.ಮೀ., ಸಂಕೇಶ್ವರದಿಂದ ನರಗುಂದ ನಡುವಿನ 175ಕಿ.ಮೀ., ಹಾವೇರಿ ಯಿಂದ ಮೊಳಕಾಲ್ಮೂರು ನಡುವಿನ 247ಕಿ.ಮೀ., ಕಾಳೇಪೇಲಾದಿಂದ ಮೈಸೂರು ನಡುವಿನ 103ಕಿ.ಮೀ., ಚಿಂತಾಮಣಿಯಿಂದ ಚೆನ್ನೂರು, ರಾಯತೆರವು ಮತ್ತು ತಾನಕಲ್ ನಡುವಿನ 55ಕಿ.ಮೀ., ಮೊಳಕಾಲ್ಮೂರು, ಅನಂತಪುರಂ ನಡುವಿನ 12ಕಿ.ಮೀ., ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಘೋಷಿಸಿ ಒಪ್ಪಿಗೆ ನೀಡಲಾಗಿದೆ. ಮೈಸೂರು-ಬೆಂಗಳೂರು, ಮಳವಳ್ಳಿ ಮತ್ತು ಖಾನಾಪುರ-ಯಲ್ಲಾಪುರ ಈ ಎರಡು ರಸ್ತೆಯ ನಡುವೆ ತಲಾ 50 ಕಿ.ಮೀ.,ನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಘೋಷಿಸಲು ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅದು ಅಂಗೀಕಾರದ ಹಂತದಲ್ಲಿದೆ.  ಒಟ್ಟು ರಾಜ್ಯದಲ್ಲಿ ಈಗಿರುವ 6432.29ಕಿ.ಮೀ. ಹೆದ್ದಾರಿಯ ಉದ್ದ 8888.29ಕಿ.ಮೀ ಆಗಲಿದೆ ಎಂದು ಮಹದೇವಪ್ಪ ತಿಳಿಸಿದರು.

Write A Comment