ಮನೋರಂಜನೆ

ಹಾಲಿವುಡ್‌ನ‌ಲ್ಲೂ ಕಿಲ್ಲಿಂಗ್‌ ವೀರಪ್ಪನ್‌!ಇನ್ನೂ ರೋಚಕ ಸಂಗತಿ…

Pinterest LinkedIn Tumblr

Ramgopal-Vermaರಾಮ್‌ಗೋಪಾಲ್‌ ವರ್ಮ ನಿರ್ದೇಶನದ “ಕಿಲ್ಲಿಂಗ್‌ ವೀರಪ್ಪನ್‌’ ಪುನಃ ನಿರ್ಮಾಣವಾಗುತ್ತಿದೆ! ಅರೇ, ಈ ವಿಷಯ ಕೇಳಿ ಅಚ್ಚರಿಯಾಗಬಹುದು. ಆದರೂ ಇದು ಸತ್ಯ. ರಾಮ್‌ಗೋಪಾಲ್‌ ವರ್ಮ ಇದೀಗ ಹಾಲಿವುಡ್‌ನ‌ಲ್ಲಿ “ಕಿಲ್ಲಿಂಗ್‌ ವೀರಪ್ಪನ್‌’ ಚಿತ್ರವನ್ನು ನಿರ್ದೇಶಿಸಲು ಅಣಿಯಾಗಿದ್ದಾರೆ ಎಂಬುದು ಈ ಹೊತ್ತಿನ ವಿಶೇಷ.

ಇತ್ತೀಚೆಗೆ “ಕಿಲ್ಲಿಂಗ್‌ ವೀರಪ್ಪನ್‌’ ಚಿತ್ರ ವೀಕ್ಷಿಸಿದ ವರ್ಮ ಅವರ ದುಬೈ ಉದ್ಯಮಿ ಗೆಳೆಯರೊಬ್ಬರು, ಈ ಚಿತ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿರ್ಮಾಣವಾಗಬೇಕು. ವೀರಪ್ಪನ್‌ ಜೀವನ ಚರಿತ್ರೆಯನ್ನು ವಿದೇಶಿಗರು ತಿಳಿದುಕೊಳ್ಳಬೇಕು. ಆದರೆ, “ವೀರಪ್ಪನ್‌ ಅಂತ್ಯ’ ಎಂಬ ಒಂದು ವಿಷಯಕ್ಕೆ ಮಾತ್ರ ಸಿನಿಮಾ ಸೀಮಿತವಾಗಬಾರದು. ಹಾಗಾಗಿ ಪುನಃ ವೀರಪ್ಪನ್‌ ಅವರ ನೈಜಬದುಕಿನ ಕಥೆ ಆಧರಿಸಿ, ಹಾಲಿವುಡ್‌ನ‌ಲ್ಲಿ ಒಂದು ಚಿತ್ರ ಮಾಡೋಣ ಎಂದು ಹೇಳಿದ್ದಾರಂತೆ. ಈಗಾಗಲೇ ಅವರು ತಮ್ಮ ಮತ್ತೂಬ್ಬ ಅಮೇರಿಕನ್‌ ಪಾಲುದಾರನೊಂದಿಗೆ ಹಾಲಿವುಡ್‌ನ‌ಲ್ಲಿ ವೀರಪ್ಪನ್‌ ಕುರಿತ ಸಿನಿಮಾ ಮಾಡಲು ಮುಂದಾಗಿದ್ದಾರಂತೆ. ಹಾಲಿವುಡ್‌ನ‌ಲ್ಲಿ ಚಿತ್ರ ನಿರ್ಮಾಣವಾಗುವುದರಿಂದ ಯಾವುದೇ ವಿಷಯದಲ್ಲೂ ರಾಜಿ ಮಾಡಿಕೊಳ್ಳದೆ ಸಿನಿಮಾ ಮಾಡುವ ಭರವಸೆಯನ್ನೂ ದುಬೈ ಉದ್ಯಮಿಯೊಬ್ಬರು ಹೇಳಿದ್ದಾರೆ ಎಂಬುದು ವರ್ಮ ಮಾತು.

ಅಂತಾರಾಷ್ಟ್ರೀಯ ಮಾರುಕಟ್ಟೆಗಾಗಿ ಪುನಃ “ಕಿಲ್ಲಿಂಗ್‌ ವೀರಪ್ಪನ್‌’ ಚಿತ್ರವನ್ನು ಆರಂಭದಿಂದ ಚಿತ್ರೀಕರಣ ಮಾಡುತ್ತಿದ್ದು, ರೆಡಿಯಾಗಲಿರುವ ಚಿತ್ರದಲ್ಲಿ  ವೀರಪ್ಪನ್‌ ಅಂತ್ಯಕ್ಕೆ ಪ್ರಾಮುಖ್ಯತೆ ನೀಡದೆ, ವೀರಪ್ಪನ್‌ ಬೆಳೆದು ಬಂದ ದಾರಿ ಮತ್ತು ಎಸ್‌ಟಿಎಫ್, ಬಿಎಸ್‌ಎಫ್ ತಂಡಗಳು ಎಂತಹ ಅಪಾಯಕಾರಿ ಹಾಗು ದುರ್ಗಮ ಪರಿಸ್ಥಿತಿಗಳಲ್ಲಿ ವೈಫ‌ಲ್ಯಗೊಮಡ ಪರಿಯೊಂದಿಗೆ ಅವನ ಸಾವಿನ ಸಂಚಿನ ಹುನ್ನಾರದ ವ್ಯೂಹ ರಚನೆ ಹೇಗಿತ್ತು ಎಂಬುದನ್ನು ತೋರಿಸುವ ಉದ್ದೇಶ ಹೊಂದಿದ್ದಾಗಿ ಹೇಳುತ್ತಾರೆ ರಾಮ್‌ಗೋಪಾಲ್‌ ವರ್ಮ.

ಹಾಲಿವುಡ್‌ನ‌ಲ್ಲಿ ನಿರ್ಮಾಣಗೊಳ್ಳಲಿರುವ ವೀರಪ್ಪನ್‌ ಕುರಿತ ಚಿತ್ರದಲ್ಲಿ ಬಿಎಸ್‌ಎಫ್ ಸಿಬ್ಬಂದಿ ವಿಮಾನಗಳಿಂದ ಲ್ಯಾಂಡ್‌ ಆಗಿ, ಅಲ್ಲಿಂದ ಕಾನ್ವಾಯ್‌ ಟ್ರಕ್‌ಗಳಲ್ಲಿ ಕಾಡಲ್ಲಿ ಪ್ರಯಾಣಿಸುವುದು, ಅಸೆಂಬ್ಲಿ ಹಾಗು ಪಾರ್ಲಿಮೆಂಟ್‌ನಲ್ಲಿ ವೀರಪ್ಪನ್‌ ಕುರಿತ ಬಿಸಿ ಚರ್ಚೆಗಳು ಹಾಗು ವೀರಪ್ಪನ್‌ ಬಗ್ಗೆ ಸ್ಟಡಿ ಮಾಡಲು, ಪುಸ್ತಕ ಬರೆಯಲು ಭಾರತಕ್ಕೆ ಬಂದ ವಿದೇಶಿ ಪತ್ರಕರ್ತರ ಕುರಿತ ಘಟನೆಗಳು ಚಿತ್ರದಲ್ಲಿರುತ್ತವೆ. ಈ ಎಲ್ಲದ್ದಕ್ಕಿಂತಲೂ ಚಿತ್ರದಲ್ಲಿ ಸೃಷ್ಟಿಸಲಿರುವ “ಎಕ್ಸ್‌ಟ್ರೀಮ್‌ ರಿಯಲಿಸ್ಟಿಕ್‌ ಅಟ್ಮಾಸ್ಪಿಯರ್‌’ ಭಾರೀ ಬಜೆಟ್‌ನಿಂದ ಕೂಡಿದ್ದು, ಅವೆಲ್ಲವೂ ಹಾಲಿವುಡ್‌ ಮಾದರಿಯಲ್ಲಿರುತ್ತವೆ ಎಂದು ವಿವರ ಕೊಡುವ ವರ್ಮ, ಇನ್ನು, ಹಾಲಿವುಡ್‌ನ‌ಲ್ಲಿ ತಯಾರಾಗಲಿರುವ ಚಿತ್ರದಲ್ಲಿ ಮೆಕಾನಿಕಲ್‌ ಎಫೆಕ್ಟ್ಗಾಗಿ ನೈಜತೆಯ ದೃಷ್ಟಿಯಿಂದ ವಿದೇಶಿಯ ಹೆಸರಾಂತ ಕಂಪ್ಯೂಟರ್‌ ಗ್ರಾಫಿಕ್ಸ್‌ ತಂತ್ರಜ್ಞರು ಕೆಲಸ ಮಾಡಲಿದ್ದಾರೆ’ ಎನ್ನುತ್ತಾರೆ.
-ಉದಯವಾಣಿ

Write A Comment