ಕರ್ನಾಟಕ

ಫೇಸ್‌ಬುಕ್ ಮೂಲಕ ಸಲಿಂಗ ಕಾಮಕ್ಕೆ ಆಹ್ವಾನ.. ಅದಕ್ಕೆ ಆಸೆ ಬಿದ್ದವರ ಮನೆಗೂ ಕನ್ನ!

Pinterest LinkedIn Tumblr

2faceಬೆಂಗಳೂರು: ಫೇಸ್‌ಬುಕ್ ಪೇಜ್‌ನಲ್ಲಿ ಪ್ರಚೋದನಾಕಾರಿ ಫೋಟೋಗಳನ್ನು ಹಾಕಿ ಸಲಿಂಗಿಗಳನ್ನು ಸೆಳೆದು, ಅವರ ಮನೆಯಲ್ಲಿ ಕಳ್ಳತನ ಮಾಡಿ ವಂಚಿಸುತ್ತಿದ್ದ ಸಲಿಂಗಿ ಕಳ್ಳನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ನಾಸಿರುದ್ದೀನ್ ಬಂಧಿತ ಕಳ್ಳ. ಈತ ಫೇಸ್‌ಬುಕ್‌ನಲ್ಲಿ ಸಲಿಂಗ ಕಾಮಿಗಳಿಗಾಗಿ ಪೇಜ್ ತೆರೆದು ಫೋಟೋಗಳನ್ನು ಹಾಕುತ್ತಿದ್ದ. ಆ ಮೂಲಕ ಅವರನ್ನು ಸಲಿಂಗ ಕಾಮಕ್ಕೆ ಸೆಳೆಯುತ್ತಿದ್ದ. ಅಂತಹವರನ್ನು ಫೇಸ್‌ಬುಕ್ ಮೂಲಕ ಸಂಪರ್ಕಿಸಿ ಅವರ ಮನೆಗೆ ಹೋಗಿ ಸೆಕ್ಸ್ ಮಾಡುವ ಆಫರ್ ನೀಡುತ್ತಿದ್ದ.

ನಂತರ ಸೆಕ್ಸ್‌ಗೆ ಆಸೆ ಬಿದ್ದವರಿಗೆ ಗೊತ್ತಿಲ್ಲದಂತೆ ನಿದ್ರೆ ಮಾತ್ರೆ ಕೊಟ್ಟು ಪ್ರಜ್ಞೆ ತಪ್ಪಿಸುತ್ತಿದ್ದ. ಪ್ರಜ್ಞೆ ಕಳೆದುಕೊಂಡ ಕೂಡಲೇ ಮನೆಯಲ್ಲಿದ್ದ ಎಲ್ಲ ಬೆಲೆ ಬಾಳುವ ವಸ್ತುಗಳನ್ನು ದೋಚಿ ನಾಸಿರುದ್ದೀನ್ ಎಸ್ಕೇಪ್ ಆಗುತ್ತಿದ್ದ. ಈ ಬಗ್ಗೆ ವ್ಯಕ್ತಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಹನುಮಂತನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಈತ ಬೆಂಗಳೂರಿನ ಹತ್ತಕ್ಕೂ ಹೆಚ್ಚು ಮಂದಿಗೆ ಈ ರೀತಿ ವಂಚನೆ ಮಾಡಿದ್ದ ಎಂದು ತಿಳಿದುಬಂದಿದೆ. ಬಂಧಿತನಿಂದ ಮೂರು ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.

Write A Comment