ಕರ್ನಾಟಕ

ಚೆನ್ನೈ ಮಳೆ ಸಂತ್ರಸ್ತರಿಗೆ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಘೋಷಿಸಿದ್ದ ಪರಿಹಾರವನ್ನು ನಿರಾಕರಿಸಿದ ತಮಿಳುನಾಡು ಸರಕಾರ !

Pinterest LinkedIn Tumblr

siddu-jaya

ಬೆಂಗಳೂರು: ಕುಂಭದ್ರೋಣ ಮಳೆಯಿಂದ ಜಲಪ್ರಳಯಕ್ಕೆ ತುತ್ತಾಗಿರುವ ತಮಿಳುನಾಡಿಗೆ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಘೋಷಿಸಿದ್ದ ಪರಿಹಾರವನ್ನು ತಮಿಳುನಾಡು ಸರ್ಕಾರ ನಿರಾಕರಿಸಿದೆ.

‘ತಮಿಳುನಾಡಿಗೆ ಕೇಂದ್ರ ಸರ್ಕಾರ ನೆರವು ನೀಡಿದ್ದು, ಸದ್ಯ ಯಾವುದೇ ರಾಜ್ಯಗಳ ಪರಿಹಾರದ ಹಣದ ಅಗತ್ಯ ಇಲ್ಲ್ಲ. ಮುಂದೆ ಅಗತ್ಯವಿದ್ದಾಗ ಸಂಪರ್ಕಿಸಲಾಗುವುದು’ ಎಂದು ಪರಿಹಾರ ಘೋಷಿಸಿದ್ದ ರಾಜ್ಯಗಳಿಗೆ ತಮಿಳುನಾಡು ಸಂದೇಶ ನೀಡಿದೆ.

ಈ ಬಗ್ಗೆ ಕರ್ನಾಟಕದ ಅಧಿಕಾರಿಗಳಿಗೂ ಮಾಹಿತಿ ನೀಡಿದ ತಮಿಳುನಾಡು ಸರ್ಕಾರ, ಸದ್ಯಕ್ಕೆ ಯಾವುದೇ ರೀತಿಯ ಪರಿಹಾರದ ಹಣದ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ಪ್ರವಾಹ ಸಂತ್ರಸ್ತರ ನೆರವಿಗೆ ಧಾವಿಸಿದ್ದ ಕರ್ನಾಟಕ, ದೆಹಲಿ, ಬಿಹಾರ, ಒಡಿಶಾ ಹಾಗೂ ಕೇರಳ ಸರ್ಕಾರಗಳು ತಲಾ 5 ಕೋಟಿ ರುಪಾಯಿ ಪರಿಹಾರ ಘೋಷಿಸಿದ್ದವು.

Write A Comment