ಕನ್ನಡ ವಾರ್ತೆಗಳು

ಡಿ.19-20: ಮಿಲಾಗ್ರಿಸ್ ಅವಿಷ್ಕಾರ್ 2015

Pinterest LinkedIn Tumblr

Milagrs_colleg_meet_1

ಮಂಗಳೂರು,ಡಿ.04 : ಹಂಪನ್ ಕಟ್ಟೆಯಲ್ಲಿರುವ ಮಿಲಾಗ್ರಿಸ್ ಶಿಕ್ಷಣ ಸಂಸ್ಥೆಗಳ ವಿಧ್ಯಾರ್ಥಿಗಳ ಪ್ರತಿಭೆಗಳನ್ನು ಅನಾವರಣಗೊಳಿಸುವ ನಿಟ್ಟಿನಲ್ಲಿ ಡಿ.19 ಹಾಗೂ 20ರ ಎರಡು ದಿನಗಳ ಉತ್ಸವವಾದ ಮಿಲಾಗ್ರಿಸ್ ಅವಿಷ್ಕಾರ್ -2015 ನ್ನು ಅಯೋಜಿಸಲಾಗಿದೆ.

167 ವರ್ಷಗಳಾ ಹಿಂದೆ 1848 ರಲ್ಲಿ ಆರಂಭವಾದ ಶಿಕ್ಷಣ ಸಂಸ್ಥೆ ” ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ ಕಾಲೇಜು ಹಾಗೂ ಪದವಿ ಕಾಲೇಜು ಶಿಕ್ಷಣ ನೀಡುತ್ತಿದ್ದು ಪ್ರಥಮ ಬಾರಿಗೆ ವಿಧ್ಯಾರ್ಥಿಗಳ ಪ್ರತಿಭೆಗೆ ಇಂತಹ ವೇದಿಕೆಯನ್ನು ಆಯೋಜಿಸಲಾಗಿದೆ. ಈ ಸಂಧರ್ಭದಲ್ಲಿ ವಿಧ್ಯಾರ್ಥಿಗಳಿಗೆ “ಮಿಲಾಗ್ರೀಸ್ ಕ್ವೀನ್ ಮತ್ತು ಮಿಲಾಗ್ರೀಸ್ ಕಿಂಗ್ ಹಾಗೂ ಮಿಲಾಗ್ರಿಸ್ ಪ್ರೀನ್ಸ್ ಮತ್ತು ಮಿಲಾಗ್ರೀಸ್ ಪ್ರಿನ್ಸಸ್ ಸ್ಪರ್ಧೆ ಏರ್ಪಡೊಸಲಾಗುತ್ತದೆ. ಸಾಂಪ್ರಾದಾಯಿಕ ಫ್ಯಾಷನ್ ಶೊ ಸ್ಪರ್ಧೆಗೆ ವಿಶೇಷ ಆಕರ್ಷಣೆ ನೀಡಲಿವೆ. ಅಂತರ್ ಕ್ಲಾಸ್ ಹಾಗೂ ವಿವಿಧ ಸ್ಪರ್ಧೆಗಳು ನಡೆಯಲಿದೆ ಎಂದು ಮಿಲಾಗ್ರೀಸ್ ಶಿಕ್ಷಣ ಸಂಸ್ಥೆಯ ಸಂಚಾಲಕ ಫಾ. ವಲೇರಿಯನ್ ಡಿ’ಸೋಜಾ ಹೇಳಿದ್ದಾರೆ.

Milagrs_colleg_meet_3 Milagrs_colleg_meet_2

ಎರಡು ದಿನದ ಈ ಕಾರ್ಯಕ್ರಮದಲ್ಲಿ ಮಿಲಾಗ್ರಿಸ್ ಸಂಸ್ಥೆಯ ವಿಧ್ಯಾರ್ಥಿಗಳು, ಅವರ ಹೆತ್ತವರು ಹಾಗೂ ಊರವರು ಭಾಗವಹಿಸುವಂತೆ ತಿಳಿಸಿದ್ದಾರೆ.

ಪ್ರತಿಕಾಗೋಷ್ಠಿಯಲ್ಲಿ ಮಿಲಾಗ್ರೀಸ್ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಫಾ. ಮೈಕ್ಲ್ ಸಾಂತುಮಾಯೋರ್, ಮಿಲಾಗ್ರೀಸ್ ಚರ್ಚ್ ಪಾಲನ ಮಂಡಳಿಯ ಉಪಧ್ಯಾಕ್ಷ ಐವ್ನ್ ಡಿ’ಸೋಜಾ, ಕಾರ್ಯದರ್ಶಿ ಸಾವಿಲ್ ಮಸ್ಕರೇನ್ಹಸ್ , ಮಿಲಾಗ್ರಿಸ್ ಚರ್ಚ್ ಪಾಲನ ಮಂಡಳಿಯ ಮಾಜಿ ಉಪಾಧ್ಯಕ್ಷ ಆಲ್ವಿನ್ ರೋಜಾರಿಯೋ, ಕಾಲೇಜಿನ ಶಿಕ್ಷಕ – ರಕ್ಷಕ ಸಮಿತಿಯ ಆಧ್ಯಕ್ಷರಾದ ರೇಮಂಡ್ ಡಿ ಕುನ್ಹಾ ಮೊದಲಾದವರು ಉಪಸ್ಥಿತರಿದ್ದರು.

Write A Comment