ರಾಷ್ಟ್ರೀಯ

ಚೆನ್ನೈನಲ್ಲಿ ವಿದ್ಯುತ್ ಇಲ್ಲದ ಕಾರಣ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 18 ರೋಗಿಗಳು ಸಾವು

Pinterest LinkedIn Tumblr

chennai-floods

ಚೆನ್ನೈ: ಶತಮಾನದ ಮಹಾಮಳೆಯಿಂದ ತತ್ತರಿಸಿರುವ ಚೆನ್ನೈನಲ್ಲಿ ವಿದ್ಯುತ್ ಇಲ್ಲದ ಕಾರಣ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 18 ರೋಗಿಗಳು ಮೃತಪಟ್ಟಿದ್ದಾರೆ.

ಚೆನ್ಮೈನ ಎಂಐಒಟಿ ಇಂಟರ್‌ನ್ಯಾಷಿನಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಈ 18 ರೋಗಿಗಳಿಗೆ ವೆಂಟಿಲೇಟರ್ ಅಳವಡಿಸಲಾಗಿತ್ತು. ಆದರೆ ವಿದ್ಯುತ್ ಕೊರೆತೆಯಿಂದಾಗಿ ವೆಂಟಿಲೇಟರ್ ಸ್ಥಗಿತಗೊಂಡು ರೋಗಿಗಳು ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಹೇಳಿದೆ.

18 ರೋಗಿಗಳ ಸಾವಿನ ಬಳಿಕ, ತಮಿಳುನಾಡು ಆರೋಗ್ಯ ಸಚಿವಾಲಯದ ಸೂಚನೆ ಹಿನ್ನೆಲೆಯಲ್ಲಿ ಎಂಐಒಟಿ ಆಸ್ಪತ್ರೆಯ ಸಿಬ್ಬಂದಿ ತಮ್ಮ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಅಳವಡಿಸಿದ್ದ 75 ರೋಗಿಗಳ ಪೈಕಿ 57 ರೋಗಿಗಳನ್ನು ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಉಳಿದ ರೋಗಿಗಳು ಕಳೆದ ಎರಡ್ಮೂರು ದಿನದಲ್ಲಿ ಮೃತಪಟ್ಟಿದ್ದಾರೆ ಎಂದು ತಮಿಳುನಾಡು ಆರೋಗ್ಯ ಇಲಾಖೆ ಕಾರ್ಯದರ್ಶಿ ಹೇಳಿದ್ದಾರೆ.

ಇನ್ನು ಆಸ್ಪತ್ರೆಯ ಸ್ಪಷ್ಟಿಕರಣ ಸರಿಯಿಲ್ಲ ಎಂದಿರುವ ತಮಿಳುನಾಡು ಸರ್ಕಾರ, ರೋಗಿಗಳ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು. ರೋಗಿಗಳ ಸಾವಿಗೂ ವಿದ್ಯುತ್ ಸಮಸ್ಯೆಗೂ ಸಂಬಂಧವಿಲ್ಲ. ರೋಗಿಗಳಿಗೆ ಎಲ್ಲಾ ರೀತಿಯ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದೆ.

Write A Comment