ಕರ್ನಾಟಕ

ಕಿಚ್ಚ ಸುದೀಪ್ ಜೊತೆಗಿನ ಸಿನೆಮಾ ಶೀಘ್ರವೇ ಸೆಟ್ಟೇರಲಿದೆ ಎಂದ ಶಿವಣ್ಣ ! ಅಷ್ಟೇ ಅಲ್ಲ …ಪುನೀತ್ ರಾಜ್‍ಕುಮಾರ್ ಜೊತೆ ಕೂಡ ಒಟ್ಟಾಗಿ ಒಂದು ಸಿನಿಮಾ ಮಾಡುತ್ತಿದ್ದಾರಂತೆ

Pinterest LinkedIn Tumblr

sudeep-shivaraj

ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಬಿಗ್ ಮಲ್ಟಿಸ್ಟಾರ್‍ಗಳ ಸಿನಿಮಾ ಶುರುವಾಗಲಿದೆ ಎಂದು ಕನ್ನಡ ಸಿನಿರಸಿಕರಿಗೆ ಸಿಹಿ ಸುದ್ಧಿಯೊಂದನ್ನು ನಟ ಶಿವಣ್ಣ ಕೊಟ್ಟಿದ್ದಾರೆ. ನಿನ್ನೆ ನಡೆದ ಬೆಳ್ಳಿಹೆಜ್ಜೆಯ ಸಂಭ್ರಮದಲ್ಲಿ ನಟ ಶಿವರಾಜ್‍ಕುಮಾರ್ ಈ ಕುರಿತು ಮಾತನಾಡಿದ್ದಾರೆ.

ಚಂದನವನದಲ್ಲಿ ಕಿಚ್ಚ ಸುದೀಪ್ ಮತ್ತು ಶಿವರಾಜ್ ಕುಮಾರ್ ಒಟ್ಟಾಗಿ ಸ್ಕ್ರೀನ್‍ಶೇರ್ ಮಾಡಬೇಕು ಎಂದು ಹಲವು ಅಭಿಮಾನಿಗಳ ಹೆಬ್ಬಯಕೆಯಾಗಿತ್ತು. ಅಭಿಮಾನಿಗಳ ಈ ಆಸೆ ಕಂಪ್ಲೀಟ್ ಆಗುವ ಸಮಯ ಸನಿಹವಾಗಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಮತ್ತು ಕಿಚ್ಚಸುದೀಪ್ ಒಟ್ಟಿಗೆ ಅಭಿನಯಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ಜೋಗಿ ಪ್ರೇಮ್ ಸಾರಥ್ಯದಲ್ಲಿ ಈ ಸಿನಿಮಾ ಸೆಟ್ಟೇರಲಿದ್ದು ಶಿವಣ್ಣ ಮತ್ತು ಸುದೀಪ್ ಅಭಿಮಾನಿಗಳಿಗೆ ಇದು ಸಂತಸದ ಸುದ್ದಿ. ಅಷ್ಟೇ ಅಲ್ಲ ಶಿವರಾಜ್‍ಕುಮಾರ್ ಮತ್ತು ಪುನೀತ್ ರಾಜ್‍ಕುಮಾರ್ ಕೂಡ ಒಟ್ಟಾಗಿ ಒಂದು ಸಿನಿಮಾ ಮಾಡುತ್ತಿದ್ದು, ಈ ಚಿತ್ರವನ್ನು ರವಿವರ್ಮ ನಿರ್ದೇಶಿಸಲಿದ್ದಾರೆ.

ನಿನ್ನೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿವತಿಯಿಂದ ಶಿವಣ್ಣನಿಗಾಗಿ ಬೆಳ್ಳಿ ಹೆಜ್ಜೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂಭ್ರಮದಲ್ಲಿ ನಿರ್ಮಾಪಕಿ ಪಾರ್ವತಮ್ಮ ರಾಜ್‍ಕುಮಾರ್, ಗೀತಾ ಶಿವರಾಜ್‍ಕುಮಾರ್, ರಾಘವೇಂದ್ರ ರಾಜ್‍ಕುಮಾರ್, ನಟಿ ತಾರಾ, ಸಾ,ರಾ ಗೋವಿಂದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ತಮ್ಮ ಸಿನಿ ಜೀವನದ ಮೆಲುಕು ಹಾಕಿದ ಶಿವಣ್ಣ ಸಖತ್ ಖುಷಿಪಟ್ಟರು.

Write A Comment