ಕರ್ನಾಟಕ

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷಾ ವೇಳಾ ಪಟ್ಟಿ ಪ್ರಕಟ

Pinterest LinkedIn Tumblr

Second_PUC_examಬೆಂಗಳೂರು: 2015 ಮತ್ತು 2016ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷಾ ವೇಳಾ ಪಟ್ಟಿ ಪ್ರಕಟವಾಗಿದ್ದು, ಮುಂಬರುವ ಮಾರ್ಚ್ 11ರಿಂದ ಪರೀಕ್ಷೆಗಳು ಆರಂಭಗೊಳ್ಳಲಿವೆ.

ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷಾ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಲಾಯಿತು. ಮುಂಬರುವ ಮಾರ್ಚ್ 11 2016ರಿಂದ ಪರೀಕ್ಷೆಗಳು ಆರಂಭಗೊಳ್ಳಲಿದ್ದು, ಮಾರ್ಚ್ 28 2016ರಂದು ಮುಕ್ತಾಯಗೊಳ್ಳಲಿದೆ ಎಂದು ಇಲಾಖೆಯ ನಿರ್ದೇಶಕರು ತಿಳಿಸಿದ್ದಾರೆ.

ಬಹುತೇಕ ಎಲ್ಲ ಪರೀಕ್ಷೆಗಳು ಬೆಳಗ್ಗೆ 9 ರಿಂದ ಆರಂಭವಾಗಲಿದ್ದು, ಕರ್ನಾಟಿಕ್ ಸಂಗೀತ ಮತ್ತು ಹಿಂದೂಸ್ತಾನಿ ಸಂಗೀತ ಪರೀಕ್ಷೆಗಳು ಮಧ್ಯಾಹ್ನ 2 ರಿಂದ ಸಂಜೆ 5.15ರವರೆಗೆ ನಡೆಯಲಿದೆ ಎಂದು ತಿಳಿದುಬಂದಿದೆ.

ಪಿಯುಸಿ ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಇಂತಿದೆ.

ಪರೀಕ್ಷಾ ದಿನಾಂಕ

ವಿಷಯ
ಮಾರ್ಚ್ 11 2016

ಜೀವಶಾಸ್ತ್ರ, ಎಲೆಕ್ಟ್ರಾನಿಕ್ಸ್

ಮಾರ್ಚ್ 12 2016

ಇತಿಹಾಸ, ಗಣಕ ವಿಜ್ಞಾನ

ಮಾರ್ಚ್ 13 2016

ರಜಾ ದಿನ

ಮಾರ್ಚ್ 14 2016

ಭೂಗೋಳ ಶಾಸ್ತ್ರ, ಗಣಿತ

ಮಾರ್ಚ್ 15 2016

ರಾಜ್ಯಶಾಸ್ತ್ರ, ಬೇಸಿಕ್ ಮ್ಯಾಥ್ಸ್

ಮಾರ್ಚ್ 16 2016

ಅರ್ಥಶಾಸ್ತ್ರ ಮತ್ತು ಭೂ ಗರ್ಭಶಾಸ್ತ್ರ

ಮಾರ್ಚ್ 17 2016

ಮನಃಶಾಸ್ತ್ರ, ಭೌತಶಾಸ್ತ್ರ

(ಕರ್ನಾಟಿಕ್ ಸಂಗೀತ,

ಹಿಂದೂಸ್ತಾನಿ ಸಂಗೀತ

ಮಧ್ಯಾಹ್ನ.2.00ರಿಂದ ಸಂಜೆ.5.15)

ಮಾರ್ಚ್ 18 2016

ತರ್ಕಶಾಸ್ತ್ರ, ಶಿಕ್ಷಣ

ಮಾರ್ಚ್ 19 2016

ಐಚ್ಛಿಕ ಕನ್ನಡ, ಸಂಖ್ಯಾಶಾಸ್ತ್ರ, ಗೃಹವಿಜ್ಞಾನ
ಮಾರ್ಚ್ 20 2016

ರಜಾ ದಿನ

ಮಾರ್ಚ್ 21 2016

ವ್ಯವಹಾರ ಅಧ್ಯಯನ, ರಾಸಾಯನಶಾಸ್ತ್ರ

ಮಾರ್ಚ್ 22 2016

ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
ಮಾರ್ಚ್ 23 2016

ಹಿಂದಿ, ತೆಲುಗು

ಮಾರ್ಚ್ 24 2016

ಸಮಾಜಶಾಸ್ತ್ರ, ಲೆಕ್ಕಶಾಸ್ತ್ರ

ಮಾರ್ಚ್ 25 2016

ಗುಡ್ ಫ್ರೈಡೆ- ರಜಾದಿನ

ಮಾರ್ಚ್ 26 2016

ಆಂಗ್ಲಭಾಷೆ

ಮಾರ್ಚ್ 27 2016

ರಜಾ ದಿನ

ಮಾರ್ಚ್ 28 2016

ಕನ್ನಡ, ತಮಿಳು, ಮಲೆಯಾಳಂ, ಅರೇಬಿಕ್

Write A Comment