ಅಂತರಾಷ್ಟ್ರೀಯ

ಹವಾಮಾನ ಬದಲಾವಣೆಗೆ ಭಾರತ ಜವಾಬ್ದಾರಿಯಲ್ಲ: ಮೋದಿ

Pinterest LinkedIn Tumblr

modi-paris30ಪ್ಯಾರಿಸ್: ಹವಾಮಾನ ಬದಲಾವಣೆ ಜಾಗತಿಕ ಸಮಸ್ಯೆಯಾಗಿದೆ. ಆದರೆ ಇದಕ್ಕೆ ಭಾರತ ಜವಾಬ್ದಾರಿಯಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಹೇಳಿದ್ದಾರೆ.

ಇಂದಿನಿಂದ ಆರಂಭವಾಗಿರುವ ಹವಾಮಾನ ಬದಲಾವಣೆ ಶೃಂಗ ಸಭೆಯಲ್ಲಿ ಭಾರತೀಯ ಪೆವಿಲಿಯನ್ ಉದ್ಘಾಟಿಸಿ ಮಾತನಾಡಿದ ಮೋದಿ, ಹವಾಮಾನ ಬದಲಾವಣೆಗೆ ಭಾರತ ಕಾರಣವಲ್ಲ. ಇದು ಜಾಗತಿಕ ತಾಪಮಾನ ಏರಿಕೆಯ ಪರಿಣಾಮ ಎಂದರು.

ಜಾಗತಿಕ ಪರಿಣಾಮದ ಸಮಸ್ಯೆಯನ್ನು ನಾವು ಎದುರಿಸುತ್ತಿದ್ದೇವೆ. ಹವಾಮಾನ ಬದಲಾವಣೆಯಿಂದ ನಮ್ಮ ದೇಶದಲ್ಲಿ ರೈತರು ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ.  ಈ ನಿಟ್ಟಿನಲ್ಲಿ ತುರ್ತು ಪರಿಹಾರ ಕ್ರಮದ ಅಗತ್ಯ ಇದೆ ಎಂದರು.

ಭಾರತವೀಗ ಹವಾಮಾನ ಬದಲವಾಣೆ ವಿರುದ್ಧದ ಹೋರಾಟದ ನಾಯಕತ್ವ ವಹಿಸಿಕೊಳ್ಳಬೇಕಿದೆ ಎಂದ ಪ್ರಧಾನಿ, ಪ್ರಕೃತಿ ಜೊತೆಗಿನ ಸಂಬಂಧ ಮರು ಸ್ಥಾಪನೆಯಾಗಬೇಕು ಮತ್ತು ಪ್ರಕೃತಿ ಜೊತೆಗಿನ ಮಾನವ ಸಂಬಂಧ ಉತ್ತಮಗೊಳ್ಳಬೇಕು ಎಂದು ಹೇಳಿದರು.

ಹವಾಮಾನ ಬದಲಾವಣೆ ಅಥವಾ ಜಾಗತಿಕ ತಾಪಮಾನ ಏರಿಕೆ ಕುರಿತ ವಿಶ್ವಸಂಸ್ಥೆಯ 21ನೇ ಶೃಂಗಸಭೆ ಇಂದಿನಿಂದ ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ ಆರಂಭವಾಗಿದ್ದು, 12 ದಿನಗಳ ಕಾಲ ನಡೆಯುವ ಈ ಶೃಂಗದಲ್ಲಿ 150 ರಾಷ್ಟ್ರಗಳ ನಾಯಕರು ಭಾಗವಹಿಸುತ್ತಿದ್ದಾರೆ.

Write A Comment