ಕರ್ನಾಟಕ

ಒಮ್ಮೆ ಹೊಡೆದಿದ್ದಕ್ಕೆ ಅಪ್ಪಾಜಿ 3 ದಿನ ಉಪವಾಸವಿದ್ರು: ನಟ ಶಿವಣ್ಣ

Pinterest LinkedIn Tumblr

shivannaಬೆಂಗಳೂರು:ಅಪ್ಪಾಜಿ(ಡಾ.ರಾಜ್ ಕುಮಾರ್) ಯದ್ದು ಮೇರು ವ್ಯಕ್ತಿತ್ವ. ದಯವಿಟ್ಟು ನನ್ನ ಅವರಿಗೆ ಹೋಲಿಸಬೇಡಿ. ಅಪ್ಪಾಜಿ ಸಿಟ್ಟು ಮಾಡಿಕೊಳ್ಳುತ್ತಿರಲಿಲ್ಲ. ನನಗೆ ಆಕ್ರೋಶ, ಆವೇಶ ಎಲ್ಲವೂ ಇದೆ. ಒಂದು ಬಾರಿ ನನಗೆ ಅಪ್ಪಾಜಿ ಹೊಡೆದಿದ್ದರು. ಆದರೆ ಅವರು 3 ದಿನ ಊಟ ಮಾಡಿರಲಿಲ್ಲ…ಇದು ಸ್ಯಾಂಡಲ್ ವುಡ್ ನಲ್ಲಿ 29 ವರ್ಷಗಳನ್ನು ಕಳೆದಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬೆಳ್ಳಿಹೆಜ್ಜೆಯಲ್ಲಿ ಬಿಚ್ಚಿಟ್ಟ ಮನದಾಳದ ಮಾತುಗಳು.

ಕರ್ನಾಟಕ ಚಲನಚಿತ್ರ ಅಕಾಡೆಮಿಯು ಸೋಮವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಬೆಳ್ಳಿಹೆಜ್ಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶಿವಣ್ಣ ಅಭಿಮಾನಿಗಳು, ಆಪ್ತರು, ಹಿತೈಷಿಗಳ ಜೊತೆ ಅಭಿಪ್ರಾಯವನ್ನು ಹಂಚಿಕೊಂಡರು.

ಕನ್ನಡ ಚಿತ್ರರಂಗದಲ್ಲಿ ನಾನು ಇಷ್ಟು ಬೆಳೆಯಲು ಅಭಿಮಾನಿಗಳೇ ಕಾರಣ. ನಿರ್ಮಾಪಕರು ನಮಗೆ ಅನ್ನದಾತರಿದ್ದಂತೆ ಎಂದ ಶಿವಣ್ಣ ಕನ್ನಡ ಭಾಷೆ, ಕಳಸಾ ಬಂಡೂರಿ, ಕಾವೇರಿ ಹೋರಾಟಕ್ಕೆ ಸದಾ ತನ್ನ ಬೆಂಬಲ ಇರುವುದಾಗಿ ಹೇಳುವ ಮೂಲಕ ತಮ್ಮ ಸಿನಿ ಹಾಗೂ ಬದುಕಿನ ಹಲವು ವಿಷಯಗಳನ್ನು ಹಂಚಿಕೊಂಡರು.

ರವೀಂದ್ರ ಕಲಾಕ್ಷೇತ್ರದಲ್ಲಿ ಸಂಜೆ ನಡೆದ  ಬೆಳ್ಳಿ ಹಬ್ಬದದಲ್ಲಿ ಶಿವಣ್ಣ ಅವರೊಂದಿಗೆ ಹಿರಿಯ ಪತ್ರಕರ್ತ ಸದಾಶಿವ ಶೆಣೈ ಮತ್ತು ನಟ, ನಿರ್ದೇಶಕ ಜಿ.ಗುರುದತ್ ಸಂವಾದ ನಡೆಸಿದರು.  ಕಾರ್ಯಕ್ರಮದಲ್ಲಿ ವಾರ್ತಾ ಇಲಾಖೆ ನಿರ್ದೇಶಕರಾದ ಎನ್ ಆರ್ ವಿಶು ಕುಮಾರ್, ಗೀತಾ ಶಿವರಾಜ್ ಕುಮಾರ್, ಹೊನ್ನಾವಳ್ಳಿ ಕೃಷ್ಣ, ತಾರಾ ಸೇರಿದಂತೆ ಹಲವು ಗಣ್ಯರು, ಅಭಿಮಾನಿಗಳು, ಆಪ್ತರು ಭಾಗವಹಿಸಿದ್ದರು.
-ಉದಯವಾಣಿ

Write A Comment