ರಾಷ್ಟ್ರೀಯ

ಮುಂದಿನ ವರ್ಷ ನೂತನ ಶಿಕ್ಷಣ ನೀತಿ: ಇರಾನಿ

Pinterest LinkedIn Tumblr

28smriti3ಹೊಸದಿಲ್ಲಿ,ನ.30: ಸರಕಾರವು ಮುಂದಿನ ವರ್ಷದಿಂದ ನೂತನ ಶಿಕ್ಷಣ ನೀತಿಯನ್ನು ಜಾರಿಗೊಳಿಸಲಿದೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮತಿ ಇರಾನಿ ಅವರು ಸೋಮವಾರ ಲೋಕಸಭೆಯಲ್ಲಿ ತಿಳಿಸಿದರು.

ನೂತನ ನೀತಿಯನ್ನು ರೂಪಿಸುವಲ್ಲಿ ತಳಮಟ್ಟದಿಂದ ಪಾಲುದಾರರ ತೊಡಗುವಿಕೆಯ ಕುರಿತ ಸರಣಿ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಅವರು, ನೂತನ ಶಿಕ್ಷಣ ನೀತಿಯನ್ನು ರೂಪಿಸಲು ಸರಕಾರವು ಬಹು ಆಯಾಮಗಳ ಸಮಾಲೋಚನೆ ಪ್ರಕ್ರಿಯೆಯನ್ನು ಕೈಗೊಂಡಿದೆ. ಈ ಪ್ರಕ್ರಿಯೆಯು ಆನ್‌ಲೈನ್, ತಳಮಟ್ಟದಲ್ಲಿ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ವಿಷಯ ಸಂಬಂಧಿ ಚರ್ಚೆಗಳನ್ನೊಳಗೊಂಡಿರುತ್ತವೆ ಎಂದು ತಿಳಿಸಿದರು.ಸಮಾಲೋಚನೆ ಪ್ರಕ್ರಿಯೆಯಲ್ಲಿ ಎರಡು ಲಕ್ಷಕ್ಕೂ ಅಧಿಕ ಗ್ರಾಮ ಪಂಚಾಯತ್‌ಗಳು, 6,000ಕ್ಕೂ ಅಧಿಕ ಬ್ಲಾಕ್‌ಗಳು ಮತ್ತು ಹಲವಾರು ನಗರ ಸಂಸ್ಥೆಗಳು ಸೇರಿವೆ ಎಂದು ಅವರು ಒತ್ತಿ ಹೇಳಿದರು.

ಪೂರಕ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಸಿಬಿಎಸ್‌ಇ ಮತ್ತು ರಾಜ್ಯ ಶಿಕ್ಷಣ ಮಂಡಳಿಗಳ ನಡುವೆ ಉತ್ತಮ ಸಮನ್ವಯದ ಫಲಿತಾಂಶಗಳು ಮುಂದಿನ ವರ್ಷದಿಂದ ಕಂಡು ಬರಲಿವೆ ಎಂದು ತಿಳಿಸಿದರು.

ಇ-ಪಾಠಶಾಲಾ ಯೋಜನೆಯಿಂದಾಗಿ ಒಂದರಿಂದ ಹತ್ತನೆ ತರಗತಿವರೆಗಿನ ಎಲ್ಲ ಸಿಬಿಎಸ್‌ಇ ಪುಸ್ತಕಗಳು ಉಚಿತವಾಗಿ ಆನ್‌ಲೈನ್‌ನಲ್ಲಿ ಮತ್ತು ಮೊಬೈಲ್ ಆ್ಯಪ್‌ಗಳ ಮೂಲಕ ದೊರೆಯುವಂತಾಗಿದೆ ಎಂದು ಅವರು ತಿಳಿಸಿದರು.

Write A Comment