ಕರ್ನಾಟಕ

ಬೆಂಗಳೂರು ಸಾಹಿತ್ಯೋತ್ಸವ ನಿರ್ದೇಶಕ ಸಂಪತ್ ರಾಜೀನಾಮೆ

Pinterest LinkedIn Tumblr

sampathಬೆಂಗಳೂರು,ನ.29: ಲೇಖಕರು ಹಾಗೂ ಸಾಹಿತಿಗಳ ತೀವ್ರ ಪ್ರತಿಭಟನೆ ಯ ಹಿನ್ನೆಲೆಯಲ್ಲಿ ಬೆಂಗಳೂರು ಸಾಹಿ ತ್ಯೋ ತ್ಸವದ ಸ್ಥಾಪಕ ವಿಕ್ರಂ ಸಂಪತ್ ಅವರು ಉತ್ಸವದ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದಾರೆ.

ವಿಕ್ರಂ ಸಂಪತ್ ಅವರು ಪ್ರಶಸ್ತಿ ವಾಪ ಸಾತಿಯನ್ನು ಖಂಡಿಸಿ ಲೇಖನ ಬರೆದಿದ್ದ ರಲ್ಲದೆ, ಮೋದಿ ಪರವಾಗಿ ಹೇಳಿಕೆಗಳ ನ್ನೂ ಈ ಹಿಂದೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಹಲವು ಪ್ರಗತಿ ಪರ ಲೇಖಕರು ಸಾಹಿತ್ಯೋತ್ಸವವನ್ನು ಬಹಿಷ್ಕರಿಸಿದ್ದರು.

ಸಾಹಿತಿಗಳ ಒಂದು ವರ್ಗವು ತನ್ನ ವಿರುದ್ಧ ನಡೆಸಿರುವ ವೈಯಕ್ತಿಕ ದಾಳಿಗಳಿಂದಾಗಿ ಸಾಹಿತ್ಯೋತ್ಸವಕ್ಕೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ನಿರ್ದೇಶಕನ ಸ್ಥಾನದಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ಸಂಪತ್ ರವಿವಾರ ಫೇಸ್‌ಬುಕ್‌ನಲ್ಲಿ ಹೇಳಿಕೆಯನ್ನು ಪೋಸ್ಟ್ ಮಾಡಿದ್ದಾರೆ. ಸಾಹಿತ್ಯ ಅಕಾಡಮಿ ಯುವ ಪುರಸ್ಕಾರ ಪಡೆದಿರುವ ಸಂಪತ್ ‘ಮೈ ನೇಮ್ ಈಸ್ ಗೌಹರ್ ಜಾನ್ ’ ಮತ್ತು ‘ಸ್ಪ್ಲೆಂಡರ್ಸ್ ಆಫ್ ರಾಯಲ್ ಪ್ಯಾಲೇಸ್ ’ ಕೃತಿಗಳನ್ನು ರಚಿಸಿದ್ದಾರೆ.

ಸಾಹಿತ್ಯೋತ್ಸವದಲ್ಲಿ ಭಾಷಣಕಾರರಾಗಿ ಆಮಂತ್ರಿತರಾಗಿದ್ದ ಕನ್ನಡ ಲೇಖಕರಾದ ದಯಾನಂದ ಟಿ.ಕೆ.ಮತ್ತು ಆರಿಫ್ ರಾಜಾ ಸಹಿತ ಹಲವರು ತಮ್ಮ ಪಾಲ್ಗೊಳ್ಳುವಿಕೆಯನ್ನು ರದ್ದುಗೊಳಿಸಿದ ಬಳಿಕ ಸಂಪತ್ ಒತ್ತಡದಲ್ಲಿ ಸಿಲುಕಿದ್ದರು. ಪ್ರಶಸ್ತಿ ವಾಪ ಸಾತಿಯನ್ನು ಟೀಕಿಸಿದ್ದಕ್ಕಾಗಿ ಸಂಪತ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಅವರಿಬ್ಬರೂ ಸಂಘಟಕರಿಗೆ ಪತ್ರಗಳನ್ನು ಬರೆದಿದ್ದರು. ಮಿಂಟ್‌ನಲ್ಲಿ ತನ್ನ ಲೇಖನವೊಂದರಲ್ಲಿ ಪ್ರಶಸ್ತಿಗಳನ್ನು ವಾಪಸ್ ಮಾಡುತ್ತಿರುವ ಸಾಹಿತಿಗಳನ್ನು ‘ಕುರಿಗಳು’ ಎಂದು ಬಣ್ಣಿಸಿದ್ದಕ್ಕಾಗಿ ಸಂಪತ್ ‘ಫ್ಯಾಶಿಸ್ಟ್’ ಮತ್ತು ‘ಬಲಪಂಥೀಯ’ವ್ಯಕ್ತಿಯಾಗಿದ್ದಾರೆ ಎಂದು ಅವರು ಆರೋಪಿಸಿದ್ದರು.

ತನ್ನ ವೈಯಕ್ತಿಕ ಅಭಿಪ್ರಾಯಗಳಿಂದಾಗಿ ಹಲವಾರು ಲೇಖಕರು ಮತ್ತು ಭಾಷಣಕಾರರು ಕಾರ್ಯಕ್ರಮದಿಂದ ಹಿಂದೆ ಸರಿದಿದ್ದಾರೆ ಎಂದಿರುವ ಸಂಪತ್, ತನ್ನ ಅನುಪಸ್ಥಿತಿ ಈ ಪ್ರತಿಭಟನೆಯಲ್ಲಿ ತೊಡ ಗಿರುವ ಸಾಹಿತಿಗಳು ನೆಮ್ಮದಿಯಿಂದ ಉತ್ಸವದಲ್ಲಿ ಪಾಲ್ಗೊಳ್ಳಲು ನೆರವಾಗುತ್ತದೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ.

Write A Comment