ಕರ್ನಾಟಕ

ತುಮಕೂರು ತಲುಪಿದ ಮೂಢನಂಬಿಕೆ ವಿರೋಧಿ ಜಾಥಾ

Pinterest LinkedIn Tumblr

yathirajuತುಮಕೂರು, ನ.29: ಸಕಲ ಜೀವಿಗಳಿಗೂ ಲೇಸನ್ನು ಬಯಸುವಂತಹ ವೈಚಾರಿಕ ಮನೋಭಾವವನ್ನು ಜನರಲ್ಲಿ ಮೂಡಿಸುವ ನಿಟ್ಟಿನಲ್ಲಿ ಸರಕಾರ ಮೌಢ್ಯಾಚರಣೆ ಪ್ರತಿಬಂಧಕ ಕಾಯ್ದೆಯನ್ನು ಜಾರಿಗೆ ತರಬೇಕು ಎಂದು ಹಿರಿಯ ಚಿಂತಕ ಸಿ.ಯತಿರಾಜು ಒತ್ತಾಯಿಸಿದ್ದಾರೆ.

ನಗರದ ಪುರಭವನ ವೃತ್ತದಲ್ಲಿ ಮಾನವ ಬಂಧುತ್ವ ವೇದಿಕೆ ಡಿ.6ರಂದು ಬೆಳಗಾವಿಯಲ್ಲಿ ಆಯೋಜಿಸಿರುವ ಮೂಢನಂಬಿಕೆ ವಿರೋಧಿ ಪರಿವರ್ತನಾ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿರುವ ಜಾಥಾ ತುಮಕೂರಿಗೆ ಆಗಮಿಸಿದ ವೇಳೆ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇವರು-ಹರಕೆಯ ಹೆಸರನಲ್ಲಿ ನಡೆಯುತ್ತಿರುವ ನರಬಲಿ, ಜನರು ಮೋಸ ಹೋಗುವುದು ನಿಲ್ಲಬೇಕಾದರೆ ಕಾಯ್ದೆ ಜಾರಿಯಾಗಲೇಬೇಕು ಎಂದರು.

ತಂತ್ರಜ್ಞಾನದ ಯುಗವಾದ 21ನೆ ಶತಮಾನದಲ್ಲಿಯೂ ನಿಧಿ ಆಸೆಗೆ ಹಸುಳೆಗಳನ್ನು ಬಲಿ ಕೊಡುತ್ತಿರುವುದು, ದಲಿತರ ಮೇಲೆ ನಡೆಯು ತ್ತಿರುವ ದೌರ್ಜನ್ಯಗಳು ನಿಜಕ್ಕೂ ನಾಚಿಕೆಗೇಡಿನ ವಿಚಾರವಾಗಿದೆ. ಜನರ ಲ್ಲಿ ವೈಜ್ಞಾನಿಕ ಮನೋಭಾವನೆ ಮೂಡದ ಹೊರತು ಇಂತಹ ವೈರುಧ್ಯ ಗಳಿಂದ ಜನರನ್ನು ಹೊರಗೆ ತರಲು ಸಾಧ್ಯವೇ ಇಲ್ಲ. ಜಾತಿ, ಧರ್ಮ, ಆಹಾರ, ಉಡುಗೆ, ತೊಡುಗೆ ವಿಚಾರದಲ್ಲಿ ಅಸಹಿಷ್ಣತೆ ಹೆಚ್ಚುತ್ತಿದ್ದು, ಇದನ್ನು ವಿರೋಧಿಸಿ ಜನರನ್ನು ವೈಚಾರಿಕ ನೆಲಗಟ್ಟಿನಲ್ಲಿ ನಡೆಸಲು ಮುಂದಾದ ವಿಚಾರವಾದಿಗಳ ಹತ್ಯೆ ಈ ದೇಶದಲ್ಲಿ ಅಸಹಿಷ್ಣತೆ ಜೀವಂತವಿದೆ ಎಂಬುದಕ್ಕೆ ಸಾಕ್ಷಿ ಎಂದು ಸಿ.ಯತಿರಾಜು ನುಡಿದರು.

ದೇವಾಲಯ ನಿರ್ಮಾಣ, ಹೋಮ, ಹವನಗಳಿಂದ ದೇವರನ್ನುಒಲಿಸಿಕೊಳ್ಳಬಹುದು ಎಂಬುದು ಸುಳ್ಳು. ಕಾಯಕವೇ ಕೈಲಾಸ ಎಂಬು ದನ್ನು ಬಸವಣ್ಣ ತೋರಿಸಿಕೊಟ್ಟರೆ, ನಿಮ್ಮ ಉದ್ಧಾರ ನಿಮಿಂದಲೇ ಎಂಬುದನ್ನು ಡಾ.ಬಿ.ಆರ್.ಅಂಬೇಡ್ಕರ್, ಜೋತಿ ಬಾಫುಲೆ, ಸಾವಿತ್ರಿ ಭಾಯಿ ಫುಲೆ ತೋರಿಸಿಕೊಟ್ಟಿದ್ದಾರೆ. ಆದರೂ ಕೆಲವರ ಸ್ವಾರ್ಥಕ್ಕೆ ಜನರು ಮೌಢ್ಯಾಚರಣೆಗೆ ಬಲಿಯಾಗುತ್ತಿರುವುದು ನಿಜಕ್ಕೂ ವಿಪರ್ಯಾಸ. ಸರ ಕಾರ ಕೂಡಲೇ ವಿಚಾರವಾದಿ ದಾಭೋಲ್ಕರ್, ಪನ್ಸಾರೆ ಮತ್ತು ಕಲಬುರ್ಗಿ ಕೊಲೆ ಆರೋಪಿಗಳನ್ನು ಬಂಧಿಸಬೇಕು ಎಂದರು.

ಲೇಖಕಿ ಬಾ.ಹ.ರಮಾಕುಮಾರಿ ಮಾತನಾಡಿ, ನಂಬಿಕೆ ಮತ್ತು ಮೂಢನಂಬಿಕೆಗೂ ಸಾಕಷ್ಟು ವ್ಯತ್ಯಾಸವಿದೆ. ಇದನ್ನು ಮೊದಲು ಜನರಿಗೆ ತಿಳಿ ಹೇಳಬೇಕಿದೆ. ಈ ನಿಟ್ಟಿನಲ್ಲಿ ನಮ್ಮ ಮಕ್ಕಳು ಓದುವ ಪಠ್ಯ ಪುಸ್ತಕಗಳಲ್ಲಿ ವೈಜ್ಞಾನಿಕ ಮತ್ತು ವೈಚಾರಿಕ ವಿಚಾರಗಳಿಗೆ ಹೆಚ್ಚು ಒತ್ತು ನೀಡುವ ಅಗತ್ಯವಿದೆ. ಎಂದರು.

ಕಾರ್ಯಕ್ರಮದಲ್ಲಿ ಮಾನವ ಬಂಧುತ್ವ ವೇದಿಕೆಯ ಸಂಚಾಲಕರು ಗರಣಿ ಗಿರೀಶ್,ಹಿಂದುಳಿದ ವರ್ಗಗಳ ಮುಖಂಡರಾದ ಟಿ.ಬಿ. ಮಲ್ಲೇಶ್, ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು. ಕಲಾ ಜಾಥಾದ ಮುಖಂಡರು ಭಾಗವಹಿಸಿದ್ದರು.

Write A Comment