ಕರ್ನಾಟಕ

ಬಿಲ್ಲವ ವಿದ್ಯಾರ್ಥಿನಿಯರ ಹಾಸ್ಟೆಲ್ ನಿರ್ಮಾಣಕ್ಕೆ ಸಿಎಂ ಜೊತೆ ಚರ್ಚೆ: ಕುಮಾರ ಬಂಗಾರಪ್ಪ

Pinterest LinkedIn Tumblr

kumar____ಬೆಂಗಳೂರು, ನ.29: ಬೆಂಗಳೂರು ನಗರ ದಲ್ಲಿ ಬಿಲ್ಲವ ಸಮಾಜದ ವಿದ್ಯಾರ್ಥಿನಿ ಯರ ಹಾಸ್ಟೆಲ್‌ನ್ನು ನಿರ್ಮಾಣ ಮಾ ಡುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚರ್ಚಿಸೋಣ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹೇಳಿದ್ದಾರೆ.

ರವಿವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಬಿಲ್ಲವ ಅಸೋಸಿಯೇಶನ್ ಆಯೋಜಿಸಿದ್ದ 39ನೆ ವಾರ್ಷಿ ಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಗರದ ಬನ್ನೇರುಘಟ್ಟದಲ್ಲಿ ಈಗಾಗಲೇ ಬಿಲ್ಲವ ಸಮಾಜದ ವಿದ್ಯಾರ್ಥಿಗಳ ಹಾಸ್ಟೆಲ್‌ನ್ನು ನಿರ್ಮಿಸಲಾಗಿದ್ದು, ಅದೇ ರೀತಿಯಾಗಿ ವಿದ್ಯಾರ್ಥಿನಿಯರ ಹಾಸ್ಟೆಲ್‌ನ್ನು ನಿರ್ಮಿಸುವ ಆವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚರ್ಚಿಸೋಣ ಎಂದು ಹೇಳಿದರು.

ಸನ್ಮಾನ: ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಬಿಲ್ಲವ ಸಮುದಾಯದ ಗಿರೀಶ್ ಪೂಜಾರಿ, ದಿನೇಶ್ ಬಂಗೇರ, ಟಿ.ರವೀಂದ್ರ ಪೂಜಾರಿ, ಎನ್.ಶ್ರೀಧರ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಬಿಬಿಎಂಪಿ ಸದಸ್ಯರಾದ ಕೆ.ವಿ.ರಾಜೇಂದ್ರ ಕುಮಾರ್, ಸುಜಾತ ರಮೇಶ್, ಅಸೋಸಿಯೇಶನ್ ಅಧ್ಯಕ್ಷ ಎಂ.ವೇದಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Write A Comment