ಕರ್ನಾಟಕ

ಆಂಡ್ರಾಯ್ಡ್ ಆ್ಯಪ್ ತಯಾರಿಸುವ ಮೂಲಕ ಹುಚ್ಚ ವೆಂಕಟ್ ಗೆ ಗಿಫ್ಟ್ ನೀಡಿದ ಅಭಿಮಾನಿಗಳು !

Pinterest LinkedIn Tumblr

venkat

ಬೆಂಗಳೂರು: ಡೈಲಾಗ್ ಗಳಿಂದಲೇ ಫೇಮಸ್ ಆಗಿರುವ ಹುಚ್ಚ ವೆಂಕಟ್ ಅವರಿಗೆ ಅವರ ಅಭಿಮಾನಿಗಳು ಈಗ ಆಂಡ್ರಾಯ್ಡ್ ಆ್ಯಪ್ ತಯಾರಿಸುವ ಮೂಲಕ ಗಿಫ್ಟ್ ನೀಡಿದ್ದಾರೆ.

ಹುಚ್ಚ ವೆಂಕಟ್ ಹೆಸರಲ್ಲಿ ಕಳೆದ ವಾರ ಆ್ಯಪ್ ಬಿಡುಗಡೆಯಾಗಿದೆ. ಈ ಆ್ಯಪ್ ನಲ್ಲಿ ಹುಚ್ಚ ವೆಂಕಟ್ ಅವರಿಗೆ ಸಂಬಂಧಿಸಿದ ಸುದ್ದಿ, ವಿಡಿಯೋ, ಆಡಿಯೋ ಗಳನ್ನು ಅಪ್ ಲೋಡ್ ಮಾಡಲಾಗುವುದು ಎಂದು ಆ್ಯಪ್ ತಯಾರಕ ಸಂಸ್ಥೆ ಹೇಳಿದೆ.

ಒಂದು ವಾರದ ಹಿಂದೆ ಬಿಡುಗಡೆಯಾಗಿದ್ದರೂ ಈಗಾಗಲೇ ಒಂದು ಸಾವಿರಕ್ಕೂ ಹೆಚ್ಚು ಮಂದಿ ‘ಅಣ್ಣ’ನ ಅಭಿಮಾನಿಗಳು ಆ್ಯಪ್ ನ್ನು ಡೌನ್ ಲೋಡ್ ಮಾಡಿದ್ದಾರೆ.

Write A Comment