ಮನೋರಂಜನೆ

ಆರೋಗ್ಯದ ಕುರಿತು ಆಘಾತಕಾರಿ ವಿಷಯವೊಂದನ್ನು ಬಹಿರಂಗಪಡಿಸಿದ ಅಮಿತಾಭ್ ಬಚ್ಚನ್ ! ಅಂಥದ್ದು ಏನು ಹೇಳಿದ್ರು….ಇಲ್ಲಿದೆ ಓದಿ…

Pinterest LinkedIn Tumblr

amitabh-bachchan

ಮುಂಬೈ: ಬಾಲಿವುಡ್‍ನ ಹಿರಿಯ ನಟ ಅಮಿತಾಭ್ ಬಚ್ಚನ್ ತಮ್ಮ ಸಿನಿಮಾದ ಮೂಲಕ ಕೋಟ್ಯಂತರ ಅಭಿಮಾನಿಗಳ ಪಾಲಿಗೆ ನೆಚ್ಚಿನ ನಟರಾಗಿದ್ದಾರೆ. ಆದರೆ ಬಚ್ಚನ್ ಈಗ ಸಿನಿರಸಿಕರ ಮುಂದೆ ಆಘಾತಕಾರಿ ವಿಷಯವೊಂದನ್ನು ಬಹಿರಂಗಪಡಿಸಿದ್ದಾರೆ.

ಹೌದು. ಅಮಿತಾಭ್ ಬಚ್ಚನ್ ತಮ್ಮ ಜೀವನ ಕಹಿ ಸತ್ಯವೊಂದನ್ನು ಅಭಿಮಾನಿಗಳ ಮುಂದೆ ಬಹಿರಂಗ ಪಡಿಸಿದ್ದಾರೆ. ಅವರ ಲಿವರ್ ಶೇ. 75 ರಷ್ಟು ಮಾರಣಾಂತಿಕ ಹೆಪಟೈಟಿಸ್ ಬಿ ವೈರಸ್‍ಗೆ ಒಳಪಟ್ಟಿದ್ದು, ಶೇ.25 ರಷ್ಟು ಮಾತ್ರ ಅವರ ಲಿವರ್ ಚೆನ್ನಾಗಿದೆಯಂತೆ. ಹಲವು ವರ್ಷಗಳಿಂದ ತಾವು ಕೇವಲ ಶೇ. 25ರಷ್ಟು ಚೆನ್ನಾಗಿರುವ ಲಿವರ್‍ನಲ್ಲಿ ಬದುಕಿದ್ದೇನೆ ಎಂದು ಹೇಳಿದ್ದಾರೆ.

ಮನುಷ್ಯ ಶೇ.12ರಷ್ಟು ಲಿವರ್ ಚೆನ್ನಾಗಿದ್ದರೂ ಬದುಕಬಹುದು ಎಂದು ಅಮಿತಾಭ್ ಹೇಳಿದ್ದಾರೆ. ಹೆಪಟೈಟಿಸ್ ವೈರಸ್ ಬಗ್ಗೆ ಜಾಗೃತಿ ಮೂಡಿಸುವ ಅಭಿಯಾನದಲ್ಲಿ ಪಾಲ್ಗೊಂಡಿದ್ದ ವೇಳೆ ಅಮಿತಾಭ್ ಇಂತದ್ದೊಂದು ಅಘಾತಕಾರಿ ವಿಷಯ ಹೇಳಿ ಅಭಿಮಾನಿಗಳನ್ನು ಬೆಚ್ಚಿ ಬೀಳಿಸಿದ್ದಾರೆ.

Write A Comment