ಅಂತರಾಷ್ಟ್ರೀಯ

ಕೆನಡಾ ಸಂಸತ್ತಿಗೆ ಮೊದಲ ಬಾರಿಗೆ ಕನ್ನಡಿಗ ಚಂದ್ರ ಆರ್ಯ ಆಯ್ಕೆ

Pinterest LinkedIn Tumblr

ChandraArya-2

ಬೆಂಗಳೂರು: ಕೆನಡಾ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ 19 ಭಾರತೀಯ ಮೂಲದವರು ಆಯ್ಕೆಯಾಗಿ ಹೊಸ ದಾಖಲೆ ಬರೆದಿದ್ದಾರೆ. ಇದರಲ್ಲಿ ಓರ್ವ ಕನ್ನಡಿಗರೂ ಇದ್ದಾರೆ ಎನ್ನುವುದು ಹೆಮ್ಮೆಯ ವಿಚಾರ.

ಚಂದ್ರ ಆರ್ಯ ಕೂಡ ಕೆನಡಾ ಸಂಸತ್‍ಗೆ ಆಯ್ಕೆಯಾಗಿರುವ ಕನ್ನಡಿಗ. 338 ಸ್ಥಾನಗಳ ಕೆನಡಾ ಸಂಸತ್‍ಗೆ ನಡೆದ ಚುನಾವಣೆಯಲ್ಲಿ, ದಶಕಕ್ಕೂ ಹೆಚ್ಚು ಕಾಲ ಆಡಳಿತ ನಡೆಸಿದ ಕನ್ಸರ್‍ವೇಟೀವ್ ಪಕ್ಷವನ್ನು ಸೋಲಿಸಿ ಅಧಿಕಾರದ ಚುಕ್ಕಾಣಿ ಹಿಡಿಯಲಿರುವ ಲಿಬರಲ್ ಪಾರ್ಟಿಯಿಂದ 15 ಮಂದಿ ಭಾರತೀಯ ಮೂಲದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಈ ಪೈಕಿ ನೇಪಿಯನ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಚಂದ್ರ ಆರ್ಯ ಗೆಲುವು ಕಂಡಿದ್ದಾರೆ.

ಇದೇ ಮೊದಲ ಬಾರಿಗೆ ಇಷ್ಟೊಂದು ಸಂಖ್ಯೆಯಲ್ಲಿ ಭಾರತೀಯ ಮೂಲದವರು ಆಯ್ಕೆಯಾಗಿದ್ದಾರೆ. ಚಂದ್ರ ಆರ್ಯ, ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿ ಮತ್ತು ಬೆಂಗಳೂರು ವಿವಿಯಿಂದ ಮೆಕಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ.

Write A Comment