ರಾಷ್ಟ್ರೀಯ

ಇಲ್ಲೊಬ್ಬ ಏಡ್ಸ್ ರೋಗ ಇತರರಿಗೂ ಹರಡಬೇಕೆಂದು 3೦೦ ಜನರೊಂದಿಗೆ ಮಲಗಿದ ! ಆಟೊ ಚಾಲಕ ಜೋಸೆಫ್ ಜೇಮ್ಸ್ ಏಕಾಗಿ ಈರೀತಿ ಮಾಡಿದ ಗೊತ್ತೇ..?

Pinterest LinkedIn Tumblr

jeseph

ಹೈದರಾಬಾದ್: ಸೋಮವಾರ ರಾತ್ರಿ ಹೈದರಾಬಾದ್ ಪೊಲೀಸರು ಆಟೋ ಚಾಲಕನನ್ನು ಬಂಧಿಸಿದಾಗ ಅವನ ಸ್ವೇಚ್ಚಾಚಾರದ ಬಗ್ಗೆ ತಿಳಿದದ್ದು ಬಹಳ ಕಡಿಮೆ. ನಂತರ ಅವನೇ ಹೇಳಿಕೊಂಡಿರುವಂತೆ ತನಗೆ ಏಡ್ಸ್ ರೋಗ ಇದೆಯೆಂದು ತಿಳಿದ ಮೇಲೆ, 31 ವರ್ಷದ ಜೋಸೆಫ್ ಜೇಮ್ಸ್, ಇತರರನ್ನು ಎಚ್ ಐ ವಿ ಸೋಂಕಿತರನ್ನಾಗಿಸಬೇಕೆಂಬ ಉದ್ದೇಶದಿಂದ 300 ಮಹಿಳೆಯರೊಂದಿಗೆ ಸಂಭೋಗ ನಡೆಸಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಮಂಗಳವಾರ ಪೊಲೀಸರು ತಿಳಿಸಿದ್ದಾರೆ.

ಕೇರಳ ಮೂಲದ ಜೇಮ್ಸ್ ನನ್ನು ಉಪ್ಪಾಳದ ಬಳಿ ವಾಹನ ತಪಾಸಣೆಗಾಗಿ ಅಡ್ಡಗಟ್ಟಿದ್ದಾಗ ಸಂಶಯಾದಾಸ್ಪದವಾಗಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. “ನಾವು ಅವನಿಂದ ವಿವರ ಕೇಳಿದಾಗ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ. ಅವನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಅವನಲ್ಲಿದ್ದ 1.25 ಲಕ್ಷ ಬೆಲೆ ಬಾಳುವ ಆಭರಣಗಳನ್ನು ವಶಪಡಿಸಿಕೊಳ್ಳಲಾಯಿತು” ಎಂದು ಉಪ್ಪಾಳ ದ ಪೊಲೀಸ್ ಅಧಿಕಾರಿ ವೈ ನರಸಿಂಹ ರೆಡ್ಡಿ ಹೇಳಿದ್ದಾರೆ.

ಮಿರ್ಜಾಲ್ಗುಡದ ಜೇಮ್ಸ್ ಪೊಲೀಸರಲ್ಲಿ ತಪ್ಪೊಪ್ಪಿಗೆ ಮಾಡಿದಾಗ ಅವರಿಗೆಲ್ಲಾ ಆಘಾತವಾಗಿದೆ. ಎಂಟು ತಿಂಗಳ ಹಿಂದೆಯೇ ಅವನಿಗಿರುವ ರೋಗದ ಬಗ್ಗೆ ತಿಳಿದಿತ್ತು. ಇನ್ನು ತನ್ನ ಜೀವನ ಅತ್ಯಲ್ಪ ಎಂದು ತಿಳಿದು ಸ್ವೇಚ್ಚಾಚಾರಕ್ಕೆ ಇಳಿದಿದ್ದಾನೆ. ಮೂರು ಬಾರಿ ಮದುವೆಯಾಗಿದ್ದ ಇವನಿಗೆ ಯಾವುದೇ ಕೌಟುಂಬಿಕ ನಿರ್ಬಂಧನೆಗಳಿರಲಿಲ್ಲ. ಮೊದಲ ಇಬ್ಬರು ಪತ್ನಿಯರು ಹಿಂದೆಯೇ ಇವನನ್ನು ತೊರೆದಿದ್ದರು ಮತ್ತು ಮೂರನೇ ಪತ್ನಿ ಪ್ರತ್ಯೇಕವಾಗಿ ವಾಸಿಸುತ್ತಿದ್ದು ಯಾವುದೇ ಮಕ್ಕಳು ಕೂಡ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Write A Comment