ಮುಂಬೈ: ಮಹಾರಾಷ್ಟ್ರದಲ್ಲಿ ಶಿವಸೇನೆ, ಬಿಜೆಪಿಯೊಂದಿಗೆ ಮೈತ್ರಿ ಕಡಿದುಕೊಳ್ಳುವ ಸೂಚನೆ ನೀಡಿದ್ದು, ಬುಧವಾರ ಪ್ರಧಾನಿ ನರೇಂದ್ರ ಮೋದಿ ಹಾಗೂ ಇತರೆ ಬಿಜೆಪಿ ನಾಯಕರನ್ನು ಕಟುವಾಗಿ ಟೀಕಿಸಿದೆ.
ಮುಂಬೈನಲ್ಲಿ ನರೇಂದ್ರ ಮೋದಿ ಅವರು ಶಿವಸೇನಾ ಸಂಸ್ಥಾಪಕ ಬಾಳ ಠಾಕ್ರೆ ಅವರಿಗೆ ತಲೆ ಬಾಗಿ ನಮಿಸುತ್ತಿರುವ ಪೊಸ್ಟರ್ಗಳು ರಾರಾಜಿಸುತ್ತಿವೆ.
ಈ ಪೊಸ್ಟರ್ನಲ್ಲಿ ಪ್ರಧಾನಿ ಹಾಗೂ ಇತರೆ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡಿರುವ ಶಿವಸೇನೆ, ‘ಢೋಂಗಿಗಳು ಸಾಹೇಬ್ ಮುಂದೆ ತಲೆ ತಗ್ಗಿಸುತ್ತಿದ್ದ ದಿನಗಳನ್ನು ಮರೆಯಬಾರದು’ ಎಂದು ಹೇಳಿದೆ.
ಮೋದಿ ನಂತರ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ನಿತಿನ್ ಗಡ್ಕರಿ ಹಾಗೂ ಹಿರಿಯ ನಾಯಕರಾದ ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ.ಆಡ್ವಾಣಿ ಅವರನ್ನು ಪೊಸ್ಟರ್ನಲ್ಲಿ ಚಿತ್ರೀಸಲಾಗಿದೆ.
