ದಾವಣಗೆರೆ, ಅ.13: ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತೆಯೋರ್ವಳ ಮೇಲೆ ಅತ್ಯಾಚಾರ ವೆಸಗಿದ ಯುವಕನೊಬ್ಬ ಈಗ ಮತ್ತೊಬ್ಬ ಯುವತಿ ಯೊಂದಿಗೆ ಊರು ಬಿಟ್ಟು ಪರಾರಿಯಾದ ಘಟನೆ ಜಗಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಶಶಿಕುಮಾರ್ (24) ಎಂಬುವವನೇ ಅತ್ಯಾಚಾರ ವೆಸಗಿದ ಯುವಕನಾಗಿದ್ದಾನೆ. ಒಂದು ತಿಂಗಳ ಹಿಂದೆ ಈತನು ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತೆ ಯೋರ್ವಳೊಡನೆ ಸಂಬಂಧ ಬೆಳೆಸಿದ್ದ. ನಂತರ ಅವಳ ಮೇಲೆ ಅತ್ಯಾಚಾರವೆಸಗಿ ಬೇರೊಬ್ಬ ಯುವತಿಯೊಂದಿಗೆ ಪರಾರಿಯಾಗಿದ್ದಾನೆಂದು ತಿಳಿದುಬಂದಿದೆ.
ಘಟನೆಯ ಬಗ್ಗೆ ಯುವತಿ ಪೋಷಕರಿಗೆ ತಿಳಿಸಿದಾಗ ಅವರು ಜಗಳೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಯುವಕನ ಪತ್ತೆಗೆ ಪೊಲೀಸರು ವ್ಯಾಪಕ ಜಾಲ ಬೀಸಿದ್ದಾರೆ. ಜಗಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸಿದ್ದಾರೆ.
