ರಾಷ್ಟ್ರೀಯ

‘ದೇವಮಾತೆ ರಾಧೆ ಮಾ ನನ್ನನ್ನು ಲೈಂಗಿಕವಾಗಿ ಶೋಷಣೆ ಮಾಡುತ್ತಿದ್ದಾಳೆ’ : ನಟಿ ಡಾಲಿ ಭಿಂದ್ರಾ ಆರೋಪ

Pinterest LinkedIn Tumblr

dolly_radhe

ಚಂಡೀಗಢ, ಅ.13: ಸ್ವಯಂ ಘೋಷಿತ ದೇವಮಾತೆ ರಾಧೆ ಮಾ ನನ್ನನ್ನು ಲೈಂಗಿಕವಾಗಿ ಶೋಷಣೆ ಮಾಡುತ್ತಿದ್ದಾಳೆ ಎಂದು ಬಾಲಿವುಡ್ ನಟಿ ಡಾಲಿ ಭಿಂದ್ರಾ ಹೇಳುವುದರೊಂದಿಗೆ ದೇವಮಾತೆ ಇದೀಗ ಮತ್ತೊಂದು ಹೊಸ ಸಂಕಷ್ಟದಲ್ಲಿ ಸಿಲುಕಿ ಹಾಕಿಕೊಂಡಿದ್ದಾಳೆ.

ದೇವಮಾತೆ ರಾಧೆ ಮಾ ಮತ್ತು ಅವಳ ಸಂಗಡಿಗರು ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದರು ಎಂದು ಬಿಗ್‌ಬಾಸ್-4ನೇ ಆವೃತ್ತಿಯ ರಿಯಾಲಿಟಿ ಶೋ ಸ್ಪರ್ಧಿಯಾಗಿದ್ದ ಡಾಲಿ ಹೇಳಿದ್ದಾರೆ. ಈ ಕುರಿತಂತೆ ನಿನ್ನೆಯೇ ದೂರು ನೀಡಿದ್ದು, ತನಿಖೆ ಕೈಗೊಂಡಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ರಾಮ್ ದಯಾಳ್ ಹೇಳಿದ್ದಾರೆ. ಪಂಚಾಬ್ ಪೊಲೀಸ್ ಇಲಾಖೆಯ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರ ಮನೆಯಲ್ಲಿ ಕೆಲವು ಮಹಿಳೆಯರು ಮತ್ತು ಒಬ್ಬ ವ್ಯಕ್ತಿ ನನ್ನನ್ನು ಲೈಂಗಿಕವಾಗಿ ಶೋಷಿಸಿದರು ಎಂದು ದೂರಿನಲ್ಲಿ ಹೇಳಲಾಗಿದೆ.

ಅಲ್ಲದೆ ದೇವಮಾತೆ ರಾಧೆ ಮಾ ಯಿಂದ ಆಶೀರ್ವಾದ ಪಡೆಯುವ ನೆಪದಲ್ಲಿ ಕೆಲವು ಮಂದಿ ಹುಡುಗ-ಹುಡುಗಿಯರ ಗುಂಪು ನನ್ನನ್ನು ಬಲವಂತವಾಗಿ ಪೀಡಿಸಿ ಅವರೊಂದಿಗೆ ಸಂಪರ್ಕ ಹೊಂದುವಂತೆ ಒತ್ತಾಯಿಸಿದ್ದರು ಎಂದು ದೂರಿನಲ್ಲಿ ಹೇಳಿದ್ದಾಳೆ. ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Write A Comment