ರಾಷ್ಟ್ರೀಯ

ಕೇಂದ್ರ ಸಾಹಿತ್ಯ ಅಕಾಡೆಮಿ ವಿರುದ್ಧ ತಮಿಳು ಸಾಹಿತಿಗಳ ವಾಗ್ದಾಳಿ

Pinterest LinkedIn Tumblr

mm-kalaburgi

ಚೆನ್ನೈ, ಅ.13: ಕನ್ನಡದ ಖ್ಯಾತ ಸಾಹಿತಿ ಮತ್ತು ವಿಚಾರವಾದಿ ಡಾ.ಎಂ.ಎಂ.ಕಲಬುರ್ಗಿ ಹತ್ಯೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ರಕ್ಷಣೆಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವಲ್ಲಿ ವಿಫಲವಾಗಿರುವ ಅಕಾಡೆಮಿ ಧೋರಣೆಯನ್ನು ಖಂಡಿಸಿರುವ ತಮಿಳಿನ 16 ಮಂದಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಳು, ಅಕಾಡೆಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಒಬ್ಬ ಸಾಹಿತಿ ತನ್ನ ಅಭಿಪ್ರಾಯವನ್ನು, ಚಿಂತನೆಗಳನ್ನು ಅಭಿವ್ಯಕ್ತಿಗೊಳಿಸುವಂತಿಲ್ಲ. ಸಾಹಿತಿಗಳಿಗೆ ರಕ್ಷಣೆಯೇ ಇಲ್ಲ. ಆದರೆ, ಇಂಥ ಹೇಯ ಕೃತ್ಯಗಳನ್ನು ಅಕಾಡೆಮಿ ಖಂಡಿಸುತ್ತಿಲ್ಲ. ಖಂಡನೆಯ ಬದಲಿಗೆ ಸಾಮಾನ್ಯ ಹೇಳಿಕೆ ಕೊಡುತ್ತಿದೆ. ಅಷ್ಟು ಸಾಕೆ..? ಕೇಂದ್ರ ಸಾಹಿತ್ಯ ಅಕಾಡೆಮಿ ಕಠಿಣ ನಿಲುವು ತಳೆಯಬೇಕು ಎಂದು ಈ ಖ್ಯಾತ ಸಾಹಿತಿಗಳು ಹೇಳಿದ್ದಾರೆ.

ಇಂದಿರಾ ಪಾರ್ಥಸಾರಥಿ, ಕಿ.ರಾಜನಾರಾ ಯಣನ್ ಪೊನ್ನೀಲನ್, ಪ್ರಭಂಜನ್, ಅಶೋಕ್ ಮಿತ್ರನ್, ತೊಪ್ಪಿಲ್ ಮೊಹಮ್ಮದ್ ಮಿರಾನ್, ಕವಿಕ್ಕೇ ಅಬ್ದುಲ್ ರೆಹಮಾನ್, ವೈರಮುತ್ತು, ಈರೋಡ್ ತಮಿಳಂಬನ್, ಮು.ಮೇಧಾ, ಮೆಲನ್ ಮೈ ಪೊನ್ನುಸಾಮಿ, ಭುವಿಯರಸು, ನಂಜಿಲ್‌ನಾದನ್, ಸು.ವೆಂಕಟೇಶನ್, ಡಿ.ಸೆಲ್ವ ರಾಜ್ ಹಾಗೂ ಪೂಮಣಿ ಅವರು ಅಕಾಡೆಮಿ ವಿರುದ್ಧ ಹರಿಹಾಯ್ದಿರುವ ಪ್ರಶಸ್ತಿ ಪುರಸ್ಕೃತ ಸಾಹಿತಿಗಳು. ಭಾರತವು ವೈವಿಧ್ಯಮಯ ಸಂಸ್ಕೃತಿ ಯತವರು. ಎಲ್ಲವೂ ಇಲ್ಲಿ ವಿಭಿನ್ನವೇ. ಈ ವಿಭಿನ್ನತೆ ಯನ್ನು ಅರ್ಥ ಮಾಡಿಕೊಳ್ಳದೆ ಹಿಂಸೆಗೆ ಇಳಿಯುವ ಪ್ರವೃತ್ತಿ ಅಕ್ಷಮ್ಯ ಅಪರಾಧ. ಇಂತಹ ಮನಸ್ಸುಗಳು ವಿಜೃಂಭಿಸುವುದನ್ನು ಕಟ್ಟುನಿಟ್ಟಾಗಿ ತಡೆಯಬೇಕು ಎಂದು ಈ ಸಾಹಿತಿ ಗಳು ಕೇಂದ್ರ ಸಾಹಿತ್ಯ ಅಕಾಡೆಮಿಯನ್ನು ಆಗ್ರಹಿಸಿದ್ದಾರೆ

Write A Comment