ಮೈಸೂರು: ಮಹಿಳೆಯರ ಅಶ್ಲೀಲ ಚಿತ್ರಗಳನ್ನು ವಾಟ್ಸಪ್, ಫೇಸ್ಬುಕ್ನಲ್ಲಿ ಹರಿಬಿಡುತ್ತಿದ್ದ ವ್ಯಕ್ತಿಯ ವಿರುದ್ಧ ನಗರ ಪೊಲೀಸ್ ಆಯುಕ್ತರಿಗೆ ಅನಾಮಧೇಯ ದೂರೊಂದು ದಾಖಲಾಗಿದೆ.
ವಿಜಯನಗರ ಠಾಣಾ ವ್ಯಾಪ್ತಿಯ ಹುಟ್ಟಗಳ್ಳಿ ನಿವಾಸಿ ಅಣ್ಣಪ್ಪ ಎಂಬಾತ ಪ್ರಕರಣದ ಆರೋಪಿಯಾಗಿದ್ದು, ಈತ ತನಗೆ ಪರಿಚಯವಿರುವ ಮಹಿಳೆಯರೊಂದಿಗೆ ಸಲುಗೆ ಬೆಳೆಸಿಕೊಂಡು ಅವರ ಜತೆ ಸಂಬಂಧ ಬೆಳೆಸಿ ಅದನ್ನು ಗುಪ್ತವಾಗಿ ಮೊಬೈಲ್ನಲ್ಲಿ ಚಿತ್ರೀಕರಿಸಿದ್ದಾನೆ. ಚಿತ್ರೀಕರಿಸಿದ ಅಶ್ಲೀಲ ದೃಶ್ಯಗಳನ್ನು ವಾಟ್ಸಪ್, ಫೇಸ್ಬುಕ್ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಸಹ ಮಾಡಿದ್ದಾನೆ.
ಈ ವಿಕೃತ ಮನಸ್ಥಿತಿಯ ಆರೋಪಿ ಬಗ್ಗೆ ತಿಳಿದ ವ್ಯಕ್ತಿಯೋರ್ವ ಮೈಸೂರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಪತ್ರ ಬರೆದಿದ್ದಾನೆ. ಇದರನ್ವಯ ಆಯುಕ್ತರ ಆದೇಶದ ಮೇರೆಗೆ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿರುವ ವಿಜಯನಗರ ಠಾಣೆ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.
