ನವದೆಹಲಿ: ‘ಎ’ ಚಿತ್ರ ಪ್ರೇಮಿಗಳಿಗೆ ಒಂದು ಸಿಹಿ ಸುದ್ದಿ. ಇನ್ಮುಂದೆ ಟಿವಿಗಳಲ್ಲಿ ವಯಸ್ಕರ ಚಿತ್ರಗಳನ್ನು ಹಾಯಾಗಿ ಮನೆಯಲ್ಲೇ ಟಿವಿಗಳಲ್ಲಿ ನೋಡಬಹುದು. ನಿರಾಶೆ ಎಂದರೆ ಆ ಚಿತ್ರಗಳ ಆಕ್ಷೇಪಾರ್ಹ ದೃಶ್ಯ, ಡೈಲಾಗ್ಗಳಿಗೆ ಕತ್ತರಿ ಪ್ರಯೋಗವಾಗಿರುತ್ತೆ. ಅಡ್ಡಿ ಇಲ್ಲ ಅದರಲ್ಲೇ ಸುಧಾರಿಸಿಕೊಳ್ಳುತ್ತೇವೆ ಎನ್ನುವವರು ಮನೆಗಳಲ್ಲೇ ಟಿವಿಗಳಲ್ಲಿ ವಯಸ್ಕರ ಸಿನಿಮಾ ನೋಡಬಹುದು.
ಟಿವಿಗಳಲ್ಲಿ ವಯಸ್ಕರ ಚಿತ್ರಗಳ ಪ್ರಸಾರದ ಮೇಲಿದ್ದ ನಿಷೇಧವನ್ನು ಸೆನ್ಸಾರ್ ಮಂಡಳಿ ತೆರವುಗೊಳಿಸಿದೆ. ಕಳೆದ 10 ತಿಂಗಳಿಂದ ಟಿವಿಗಳಲ್ಲಿ ವಯಸ್ಕರ ಚಿತ್ರಗಳ ಪ್ರಸಾರ ಕುರಿತು ನಿರ್ಬಂಧ ವಿಧಿಸಲಾಗಿತ್ತು. ಇದೀಗ ಚಿತ್ರರಂಗದವರು, ಬ್ರಾಡ್ ಕಾಸ್ಟರ್ಗಳ ಒತ್ತಡ ಹಿನ್ನೆಲೆಯಲ್ಲಿ ಸೆನ್ಸಾರ್ ಮಂಡಳಿ ತಲೆ ಬಾಗಿದೆ.
ನಿಷೇಧದ ಕುರಿತು ಸೆನ್ಸಾರ್ ಮಂಡಳಿ ಅಧ್ಯಕ್ಷ ಪಂಕಜ್ ನಿಹ್ಲಾನಿ ಹೇಳಿಕೆ ನೀಡಿದ್ದಾರೆ. ಕೆಲ ಷರತ್ತುಗಳ ಮೇಲೆ ವಯಸ್ಕರ ಚಿತ್ರಗಳನ್ನು ಪ್ರಸಾರ ಮಾಡಲು ಸೆನ್ಸಾರ್ ಮಂಡಳಿ ಅನುಮತಿ ನೀಡಿದೆ. ಅಂದ್ರೆ ‘ಎ’ ಸರ್ಟಿಫಿಕೇಟ್ ಚಿತ್ರಗಳಲ್ಲಿನ ಆಕ್ಷೇಪಾರ್ಹ ದೃಶ್ಯ, ಡೈಲಾಗ್ಗಳಿಗೆ ಕತ್ತರಿ ಪ್ರಯೋಗಿಸಲು ನಿರ್ಮಾಪಕರಿಗೆ ಸೂಚಿಸಲಿದೆ. ಇದರೊಂದಿಗೆ ಅಷ್ಟಿಷ್ಟು ಕತ್ತರಿ ಪ್ರಯೋಗಗಳೊಂದಿಗೆ ಎ ಸರ್ಟಿಫಿಕೇಟ್ ಸಿನಿಮಾಗಳು ಯುಎ ಸರ್ಟಿಫಿಕೇಟ್ ಸಿನಿಮಾಗಳಾಗಿ ಟಿವಿಗಳಲ್ಲಿ ಪ್ರಸಾರಗೊಳ್ಳಲಿವೆ.
