ಕನ್ನಡ ವಾರ್ತೆಗಳು

ಕೊಲ್ಲೂರು ಮೂಕಾಂಬಿಕೆ ಕ್ಷೇತ್ರದಲ್ಲಿ ನವರಾತ್ರಿ ಉತ್ಸವದ ಸಂಭ್ರಮ

Pinterest LinkedIn Tumblr

Kolluru_Mookambike_Devi

ಕುಂದಾಪುರ: ಕೊಲ್ಲೂರು ಶ್ರೀ ಮೂಕಾಂಬಿಕೆಯ ಕ್ಷೆತ್ರದಲ್ಲಿ ಅ. 13 ರಿಂದ ಅ. 22ರ ವರೆಗೆ ನಡೆಯುವ ನವರಾತ್ರಿ ಉತ್ಸವಕ್ಕೆ ಸಜ್ಜಾಗಿದ್ದು ಭಕ್ತರ ಅನುಕೂಲತೆಗೆ ಸಕಲ ಸೌಕರ್ಯ ಒದಗಿಸಲಾಗಿದೆ.

ಕೋಲಾಪುರೇಶ್ವರಿಯಾಗಿರುವ ಮಹಾಲಕ್ಷ್ಮೀ ಮೋಕ್ಷದಾಯಕವಾದ ಸಪ್ತಕ್ಷೇತ್ರಗಳಲ್ಲೊಂದಾದ ಕೊಲ್ಲೂರು ಸಿದ್ಧಿಕ್ಷೇತ್ರವಾಗಿದೆ. ಸುಂದರ ಪ್ರಕೃತಿಯ ನಡುವೆ ನೀಲಿ ಆಕಾಶವನ್ನು ಸಂಗಮಿಸುವ ಕೊಡಚಾದ್ರಿ ಬೆಟ್ಟವು ಈ ಕ್ಷೇತ್ರದ ಮೂಲಸ್ಥಾನ. ಕೊಲ್ಲೂರಿನ ಪವಿತ್ರವಾದ ಸೌಪರ್ಣಿಕಾ ನದಿಯಲ್ಲಿ ಸ್ನಾನ ಮಾಡಿ ಒದ್ದೆಬಟ್ಟೆಯಲ್ಲೇ ಶ್ರೀ ದೇವಿಯ ದರ್ಶನ ಮಾಡಿದರೆ ರೋಗರುಜಿನ ಸಮೇತ ಪಾಪ ಪರಿಹಾರವಾಗುವುದೆಂಬ ಪ್ರತೀತಿಗೆ ಪೂರಕವಾದ ಅನೇಕ ನಿದರ್ಶನಗಳಿವೆ.

Kolluru_Mookambika-Janmashtami (7) Kolluru_Mookambika-Janmashtami (11)

ಅ. 21 ರಂದು ರಾತ್ರಿ ನಡೆಯುವ ರಥೋತ್ಸವ ಹಾಗೂ ಅ. 22ರಂದು ನಡೆಯುವ ವಿಜಯದಶಮಿ ವಿದ್ಯಾರಂಭವು ದೇಶವಿದೇಶಗಳ ಸಹಸ್ರಾರು ಭಕ್ತರನ್ನು ಆಕರ್ಷಿಸಿದೆ. ವಿದ್ಯಾರಂಭಕ್ಕೆ ದಕ್ಷಿಣ ಭಾರತ ಹಾಗೂ ಉತ್ತರ ಭಾರತದಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ತಮ್ಮ ಪುಟ್ಟಮಕ್ಕಳನ್ನು ಕರೆತಂದು ಸರಸ್ವತಿ ಮಂಟಪದಲ್ಲಿ ಮಕ್ಕಳ ನಾಲಿಗೆಯ ಮೇಲೆ ಓಂಕಾರವನ್ನು ಬರೆಸುವ ಪದ್ಧತಿಯು ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದೆ.

ನವರಾತ್ರಿ ಉತ್ಸವದ ಹಿನ್ನೆಲೆ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆಯೂ ಜಾಸ್ಥಿಯಾಗಿದ್ದು ಅವರಿಗೆ ಅನುಕೂಲವನ್ನು ಕಲ್ಪಿಸುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನಿತ್ಯ ಶ್ರೀ ದೇವಿ ಸನ್ನಿಧಿಯಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯಲಿದೆ.

(ಸಂಗ್ರಹ ಚಿತ್ರಗಳು)

Write A Comment