ಕರ್ನಾಟಕ

ಪ್ರಧಾನಿ ಬಳಿ ಮಾತನಾಡಲಾಗದ ಬಿಜೆಪಿ ನಾಯಕರಿಗೆ ಧಮ್ ಇಲ್ಲ: ಸಿದ್ದರಾಮಯ್ಯ

Pinterest LinkedIn Tumblr

Siddaramaiahಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಬಳಿ ಮಾತನಾಡಲಾಗದ ಬಿಜೆಪಿ ನಾಯಕರಿಗೆ ಧಮ್ ಇಲ್ಲ. ಹೀಗಾಗಿಯೇ ದೆಹಲಿಯಲ್ಲಿ ಮೌನವಹಿಸಿ ಇದೀಗ ಇಲ್ಲಿ ಬಂದು ಸುಖಾಸುಮ್ಮನೆ ಹೇಳಿಕೆಗಳನ್ನು ನೀಡುತ್ತಿದ್ದಾರೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಹೇಳಿದ್ದಾರೆ.

ಈ ಕುರಿತಂತೆ ಗೃಹ ಕಚೇರಿ ಕೃಷ್ಣದಲ್ಲಿ ಮಾತನಾಡಿರುವ ಅವರು, ಕಳಸಾ-ಬಂಡೂರಿ, ಮಹದಾಯಿ ಮತ್ತು ಮಲಪ್ರಭಾ ನದಿ ಜೋಡಣಾ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರದ ಬಳಿ ರಾಜ್ಯ ಸರ್ಕಾರ ಸರ್ವಪಕ್ಷಗಳ ನಿಯೋಗವನ್ನು ಕೊಂಡೊಯ್ದಿತ್ತು. ಅಂದು ನಡೆದ ಸರ್ವಪಕ್ಷ ಸಭೆಯಲ್ಲಿ ಬಿಜೆಪಿ ನಾಯಕರು ಮಾತನಾಡಲಿಲ್ಲ. ಇಂದು ರಾಜ್ಯಕ್ಕೆ ಬಂದು ಜನರನ್ನು ಹಾದಿ ತಪ್ಪಿಸಲು ಮನಬಂದಂತೆ ಮಾತನಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಕಳಸಾ-ಬಂಡೂರಿ ವಿಷಯದಲ್ಲಿ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳ ಸಭೆ ಕರೆದು ಮಧ್ಯಸ್ಥಿಕೆ ವಹಿಸಬೇಕಾದ ಪ್ರಧಾನಿಯವರೇ ಮೊದಲು ವಿರೋಧ ಪಕ್ಷದ ನಾಯಕರ ಜತೆ ಚರ್ಚೆ ನಡೆಸಿ ಎಂದು ಹೇಳುತ್ತಿರುವುದು ನಿಜಕ್ಕೂ ವಿಪರ್ಯಾಸ ಸಂಗತಿ. ನನ್ನ 40 ವರ್ಷದ ಇತಿಹಾಸದಲ್ಲಿ ಈ ರೀತಿ ಹೇಳುವ ಪ್ರಧಾನಿಯನ್ನೇ ನೋಡಿಯೇ ಇಲ್ಲ ಇದೇ ಮೊದಲು ಎಂದು ತಿಳಿಸಿದ್ದಾರೆ.

Write A Comment