ಮನೋರಂಜನೆ

ರಾಕಿಂಗ್ ಸ್ಟಾರ್ ಯಶ್’ಗೆ ಡೆಡ್ಲಿ ಆದಿತ್ಯ ಎದುರಾಳಿ !

Pinterest LinkedIn Tumblr

yesಸ್ಯಾಂಡಲ್ ವುಡ್’ನಲ್ಲಿ ರಾಜಾಹುಲಿಯಾಗಿ ಮೆರೆಯುತ್ತಿರುವ ರಾಕಿಂಗ್ ಸ್ಟಾರ್ ಯಶ್’ಗೆ ನಟ ಆದಿತ್ಯ ಎದುರಾಳಿಯಂತೆ!

ಈ ಇಬ್ಬರು ಸ್ಯಾಂಡಲ್ ವುಡ್ ಸ್ಟಾರ್ಸ್ ನಡುವೆ ಅಂತದ್ಹೇನಾಯ್ತು ಅಂತ ಯೋಚಿಸ್ಬೇಡಿ…

ಅಷ್ಟಕ್ಕೂ ಡೆಡ್ಲಿ ಆದಿತ್ಯ ರಾಕಿಂಗ್ ಸ್ಟಾರ್’ರ ಮುಂದಿನ ಚಿತ್ರದಲ್ಲಿ ವಿಲನ್ ಆಗಲಿದ್ದಾರೆಂಬ ಸುದ್ದಿಯೊಂದು ಗಾಂಧಿನಗರದಿಂದ ಕೇಳಿ ಬಂದಿದೆ.

ಹೀರೋ ಆಗಿ ಕೆಲ ಚಿತ್ರಗಳಲ್ಲಿ ಮಿಂಚಿದ್ದ ಆದಿತ್ಯರಿಗೆ ಅದೇಕೊ ಅದೃಷ್ಟ ಕೈಹಿಡಿಯಲಿಲ್ಲ. ಹೀಗಾಗಿ ಕಾಲಿವುಡ್’ನಲ್ಲಿ ವಿಲನ್ ಅವತಾರದಲ್ಲಿ ಕಾಣಿಸಿದ್ದ ಡೆಡ್ಲಿ ಸೋಮ ಈಗ ಮತ್ತೆ ಸ್ಯಾಂಡಲ್ ವುಡ್’ಗೆ ಹಿಂತಿರುಗಿದ್ದಾರೆ.

ಕೆಲ ವರದಿಗಳ ಪ್ರಕಾರ ಯಶ್ ಅಭಿನಯದ ತಮಿಳು ರಿಮೇಕ್ ಚಿತ್ರದಲ್ಲಿ ಆದಿತ್ಯ ಖಳನಾಗಿ ಬಣ್ಣಹಚ್ಚಲಿದ್ದಾರೆ. ಅಷ್ಟೇ ಅಲ್ಲದೆ ಮಾಸ್ಟರ್ ಪೀಸ್ ಚಿತ್ರದಲ್ಲಿ ಆದಿತ್ಯ ವಿಲನ್ ಪಾತ್ರದಲ್ಲಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಕೂಡ ಹುಟ್ಟಿಕೊಂಡಿದೆ.

ತಮಿಳಿನ ವಾಲು ಚಿತ್ರವನ್ನು ಯಶ್ ಕನ್ನಡದಲ್ಲಿ ರಿಮೇಕ್ ಮಾಡಲಿದ್ದು  ‘ವಾಲು’ನಲ್ಲಿ ಖಡಕ್ ವಿಲನಾಗಿ ಮಿಂಚಿದ್ದ ಆದಿತ್ಯ ಇಲ್ಲೂ ಖಳನಾಗಿ ಮುಂದುವರಿಯಲಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡ್ತಿದೆ.

ಈ ಇಬ್ಬರೂ ನಟರು ರಫ್ ಅಂಡ್ ಟಫ್ ಪಾತ್ರಗಳಲ್ಲಿ ಸ್ಯಾಂಡಲ್ ವುಡ್’ನಲ್ಲಿ ಈಗಾಗಲೇ ಮಿಂಚು ಹರಿಸಿದ್ದರಿಂದ ಇವರಿಬ್ಬರ ಜುಗಲ್ ಬಂದಿ ಪ್ರೇಕ್ಷಕರಿಗೆ ರಸದೌತಣ ನೀಡಲಿದೆ ಎಂಬುದು ಗಾಂಧಿನಗರ ಪಂಟರ ಅಭಿಪ್ರಾಯ.

-ಕಪ್ಪು ಮೂಗುತ್ತಿ
-ಉದಯವಾಣಿ

Write A Comment