ಕರ್ನಾಟಕ

ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣ : ತಂಡದ ಅಧಿಕಾರಿಗಳ ಜತೆ ಸಿಐಡಿ ಡಿಜಿಪಿ ಕಿಶೋರ್ ಚಂದ್ರ ಸಭೆ

Pinterest LinkedIn Tumblr

kalburgiಧಾರವಾಡ, ಸೆ.14- ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಅವರ ಹತ್ಯೆ ಹಿನ್ನೆಲೆಯಲ್ಲಿ ಸಿಐಡಿ ಡಿಜಿಪಿ ಕಿಶೋರ್ ಚಂದ್ರ ಅವರು ಇಂದು ಧಾರವಾಡಕ್ಕೆ ಭೇಟಿ ನೀಡಿ ತನಿಖಾ ತಂಡದ ಅಧಿಕಾರಿಗಳೊಂದಿಗೆ ಗೌಪ್ಯ ಸ್ಥಳದಲ್ಲಿ ಸುದೀರ್ಘ ಚರ್ಚೆ ನಡೆಸಿದರು. ತನಿಖೆ ಯಾವ ರೀತಿ ನಡೆದಿದೆ ಮತ್ತು ಯಾವ ಹಂತದಲ್ಲಿದೆ ಎಂಬ ಬಗ್ಗೆ ಮಾಹಿತಿ ಪಡೆದುಕೊಂಡ ಅವರು, ಅಧಿಕಾರಿಗಳಿಗೆ ಕೆಲವು ಸೂಚನೆಗಳನ್ನು ನೀಡಿದರು. ನಂತರ ಅವರು ಕಲಬುರ್ಗಿ ಅವರ ಮನೆಗೆ ಭೇಟಿ ನೀಡಿ ಕುಟುಂಬದ ಸದಸ್ಯರ ಜೊತೆ ಚರ್ಚೆaನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಮನೆಯ ಸುತ್ತಮುತ್ತಲ ಪ್ರದೇಶದ ನಾಗರಿಕರನ್ನು ವಿಚಾರಣೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ಹತ್ಯೆಯ ಬಗ್ಗೆ ವಿವರ ಪಡೆದುಕೊಂಡು ಕೆಲವರನ್ನು ವಿಚಾರಿಸಿ ನಂತರ ಹಿರಿಯ ಸಾಹಿತಿಗಳನ್ನು ಕಂಡು ಸುದೀರ್ಘವಾಗಿ ಚರ್ಚಿಸಲಿದ್ದಾರೆ.

ಇವರೊಂದಿಗೆ ಸಿಐಡಿ ಮುಖ್ಯಸ್ಥ ರಾಜಪ್ಪ ಹಾಗೂ ಅವರ ತಂಡದವರೂ ಇದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ. ಕಿಶೋರ್‌ಚಂದ್ರ ಅವರು ಗೌಪ್ಯಸ್ಥಳದಲ್ಲಿದ್ದು, ಕೆಲವರನ್ನು ವಿಚಾರಿಸಿದ್ದಾರೆಂದು ಮೂಲಗಳು ತಿಳಿಸಿವೆ.
ಕಲಬುರ್ಗಿ ಅವರ ಹತ್ಯೆಗೆ ಸೈದ್ಧಾಂತಿಕ ಹಿನ್ನೆಲೆಗಳೇ ಕಾರಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಕಿಶೋರ್‌ಚಂದ್ರ ಅವರು, ಹತ್ಯೆಗೆ ಆಸ್ತಿ ವಿವಾದ ಅಥವಾ ಕೌಟುಂಬಿಕ ವಿಷಯ ಕಾರಣವಿರಬಹುದೆಂಬುದನ್ನು ಅಲ್ಲಗಳೆದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಆದಷ್ಟು ಶೀಘ್ರ ಹಂತಕರನ್ನು ಪತ್ತೆಹಚ್ಚಲಾಗುವುದು ಎಂದು ತಿಳಿಸಿದ್ದಾರೆ.

ಡಾ.ಎಂ.ಎಂ.ಕಲಬುರ್ಗಿ ಅವರ ಹತ್ಯೆಯಾಗಿ ಹಲವಾರು ದಿನಗಳು ಕಳೆದರೂ ಹಂತಕರು ಪತ್ತೆಯಾಗದ ಬಗ್ಗೆ ಹಿರಿಯ ಸಾಹಿತಿಗಳು, ಚಿಂತಕರು, ಕಲಾವಿದರು ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಹಿರಿಯ ಅಧಿಕಾರಿಗಳು ನಗರಕ್ಕೆ ಭೇಟಿ ನೀಡಿ ಪತ್ತೆ ಕಾರ್ಯಗ ಚುರುಕುಗೊಳಿಸಿದ್ದಾರೆ.

Write A Comment