ಕರ್ನಾಟಕ

ರಾಜಕಾಲುವೆ ಒತ್ತುವರಿ ತೆರವಿಗೆ ಮೇಯರ್ ಸೂಚನೆ

Pinterest LinkedIn Tumblr

ಮೆಯೊರಬೆಂಗಳೂರು, ಸೆ.14- ಮಳೆ ಬಂದಾಗಲೆಲ್ಲಾ ಜನವಸತಿ ಪ್ರದೇಶಗಳಿಗೆ ನೀರು ನುಗ್ಗಿ ಸಮಸ್ಯೆಗಳು ಪುನಾರಾವರ್ತನೆಯಾಗುತ್ತವೆ ಇದಕ್ಕೆ ಕಾರಣವಾಗಿರುವ ರಾಜಕಾಲುವೆಗಳ ಒತ್ತುವರಿಯನ್ನು ತೆರವುಗೊಳಿಸಲು ಮುಂದಾಗಬೇಕು ಎಂದು ಮೇಯರ್ ಮಂಜುನಾಥ ರೆಡ್ಡಿ ಇಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಇಂದು ಬೆಳಗ್ಗೆ ಕಚೇರಿಗೆ ಆಗಮಿಸಿದ ಮೇಯರ್ ಅವರನ್ನು ಆಯುಕ್ತ ಕುಮಾರ್ ನಾಯಕ್. ಮತ್ತಿತರ ಅಧಿಕಾರಿಗಳು ಸ್ವಾಗತಿಸಿದರು. ನಂತರ ಅಧಿಕಾರಿಗಳ ಜತೆ ಪ್ರಥಮ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಬಿಬಿಎಂಪಿ ಆಡಳಿತಾಧಿಕಾರಿ ಇದ್ದ ಸಂದರ್ಭದಲ್ಲಿ ನಡೆದಂತಹ ಪ್ರಗತಿ ಮತ್ತು ತೆಗೆದುಕೊಂಡ ಸುಧಾರಣೆ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಕೇಳಿದರು.  ಪಾಲಿಕೆಯ ಮಾನ ಹಾಳಾಗಲು ಆರ್ಥಿಕ ಇಲಾಖೆ ಮುಖ್ಯ ಕಾರಣವಾಗಿದ್ದು,  ಕಳೆದ 4 ತಿಂಗಳಲ್ಲಿ ಸಾಲ ತೀರಿಸಿರುವುದು.

ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡಿರುವುದು. ಯಾವುದೇ ರೀತಿಯಲ್ಲಿ ಚೆಕ್ ವ್ಯವಹಾರ ಮಾಡದೆ ನೇರವಾಗಿ ಆರ್‌ಟಿಜಿಎಸ್ ಮೂಲಕ ಹಣ ಸಂದಾಯ ಮಾಡಿರುವುದು ಒಳ್ಳೆಯ ಬೆಳವಣಿಗೆ.
ನಿಮ್ಮ ಕಾರ್ಯವನ್ನು ಮೆಚ್ಚುತ್ತೇನೆ. ಆದರೂ ಮತ್ತಷ್ಟು ಸುಧಾರಣೆಯಾಗಬೇಕು ಎಂದು ಮೇಯರ್ ತಿಳಿಸಿದರು.

ಇದಾದ ನಂತರ ಎಲ್ಲಾ ಅಧಿಕಾರಿಗಳ ಪರಿಚಯ ಮಾಡಿಕೊಂಡು ಮುಖ್ಯವಾಗಿ ಈಗ ಮಳೆ ಬಂದಾಗಲೆಲ್ಲಾ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಜನರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಾರೆ. ಇದನ್ನು ನಾನು ಪಾಲಿಕೆ ಸದಸ್ಯನಾಗಿದ್ದಾಗಿನಿಂದಲೂ ಕೌನ್ಸಿಲ್ ಸಭೆಯಲ್ಲಿ ಪ್ರಸ್ತಾಪಿಸುತ್ತಲೇ ಬಂದಿದ್ದೇನೆ. ಇದಕ್ಕೆ ರಾಜಕಾಲುವೆಗಳನ್ನು ಕೆಲವರು ಒತ್ತುವರಿ ಮಾಡಿಕೊಂಡಿರುವುದು ಕಾರಣ ಎಂಬುದು ನಿಮಗೂ ಗೊತ್ತು. ಆದರೆ ಅದನ್ನು ತೆರವುಗೊಳಿಸಲು ನೀವು ಏಕೆ ಮುಂದಾಗುತ್ತಿಲ್ಲ ಎಂದು ಪ್ರಶ್ನಿಸಿದರು. ಈಗಾಗಲೇ ನ್ಯಾಯಾಲಯ ಕೂಡ ಇದರ ಬಗ್ಗೆ ಕಠಿಣ ನಿರ್ಧಾರ ಕೈಗೊಳ್ಳಲು ಸೂಚನೆ ನೀಡಿದೆ. ಸರ್ವೆ ಕಾರ್ಯ ಕೂಡ ಮುಗಿದಿದ್ದು , ಶೀಘ್ರದಲ್ಲೇ ತೆರವು ಕಾರ್ಯಾಚರಣೆಯನ್ನು ಚುರುಕುಗೊಳಿಸಿ ಎಂದು ಮೌಖಿಕವಾಗಿಯೇ ಸೂಚಿಸಿದರು.

ನಂತರ ನಗರದ ರಸ್ತೆಗಳಲ್ಲಿ ನಗರೋತ್ಥಾನ ಯೋಜನೆಯಡಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಆದರೆ ಅದರ ಗುಣಮಟ್ಟವನ್ನು ಪರಿಶೀಲಿಸಲು ಮೂರನೆ ವ್ಯಕ್ತಿಗೆ (ಸಂಸ್ಥೆಗೆ) ನೀಡಲಾಗುತ್ತದೆ. ನಮ್ಮ ಪಾಲಿಕೆಯಲ್ಲೇ ಒಳ್ಳೆಯ ಅಧಿಕಾರಿಗಳನ್ನು ಈ ವಿಭಾಗಕ್ಕೆ ನೇಮಿಸೋಣ ಮತ್ತು ತಾಂತ್ರಿಕ ಕೌಶಲ್ಯ , ಜ್ಞಾನ ಹೊಂದಿರುವವರನ್ನು ಕೂಡ ನೇಮಕಾತಿ ಮಾಡಿಕೊಳ್ಳಲು ಸಾಧ್ಯವಿಲ್ಲವೇ ಎಂದು ಮೇಯರ್ ಮಾಹಿತಿ ಪಡೆದುಕೊಂಡರು. ನಂತರ ಮತ್ತೊಂದು ಸಭೆ ನಡೆಸಿ ಇದರ ಬಗ್ಗೆ ಸಂಕ್ಷಿಪ್ತವಾಗಿ ಚರ್ಚಿಸೋಣ ಎಂದು ಅವರು ತಿಳಿಸಿದರು.

Write A Comment