ಕ್ಯಾಲಿಫೋರ್ನಿಯಾ, ಸೆ.14-ಇಲ್ಲಿನ ಲೇಕ್ ಮತ್ತು ನಾಸಾ ಕೌಂಟಿಗಳ ಅರಣ್ಯ ಪ್ರದೇಶದಲ್ಲಿ ಹೊತ್ತಿ ಉರಿಯುತ್ತಿರುವ ಕಾಳ್ಗಿಚ್ಚು ಇನ್ನೂ ಕೂಡ ನಿಯಂತ್ರಣಕ್ಕೆ ಬಾರದೆ ಮುಂದುವರೆದಿದ್ದು, ಈ ಭಾಗದಲ್ಲಿ ಸಾವು-ನೋವುಗಳು ಸಂಭವಿಸುವ ಸಾಧ್ಯತೆಗಳಿರುವುದರಿಂದ, ಗವರ್ನರ್ ಜೆರ್ರಿಬ್ರೌನ್ ಈ ಪ್ರದೇಶದಲ್ಲಿ ತುರ್ತುಸ್ಥಿತಿ ಘೋಷಿಸಿದ್ದಾರೆ.
ಈ ಭಾಗದಲ್ಲಿ ತುರ್ತು ಸ್ಥಿತಿ ಆ ದೇಶ ನೀಡಿರುವುದರಿಂದ ರಕ್ಷಣಾ ಕಾರ್ಯಗಳು ಚುರುಕಿನಿಂದ ತ್ವರಿತಗತಿಯಲ್ಲಿ ನಡೆಯುತ್ತಿದ್ದು, ಸಾವಿರಾರು ಜನರನ್ನು ಮನೆಗಳಿಂದ ತೆರವುಗೊಳಿಸಿ ಸುರಕ್ಷತಾ ಸ್ಥಾನಗಳಿಗೆ ರವಾನಿಸಲಾಗುತ್ತಿದೆ. ಮನೆಗಳಲ್ಲಿರುವ ವಸ್ತುಗಳು, ದಾಖಲೆಗಳನ್ನು ಸುರಕ್ಷಿತವಾಗಿರಿಸುವ ಕಾರ್ಯವೂ ನಡೆದಿದೆ.
ಸುಮಾರು 115 ಮೈಲುಗಳ ವ್ಯಾಪ್ತಿಯಲ್ಲಿ ಈ ಕಾಳ್ಗಿಚ್ಚು ವ್ಯಾಪಿಸಿಕೊಂಡಿದ್ದು ನೂರಾರು ಅಗ್ನಿಶಾಮಕ ಯಂತ್ರಗಳು, ಸಿಬ್ಬಂದಿ, ಪೊಲೀಸರು ಬೆಂಕಿ ನಿಯಂತ್ರಿಸುವ ನಿಟ್ಟಿನಲ್ಲಿ ಹರಸಾಹಸ ಪಡುತ್ತಿದ್ದಾರೆ. ಕನಿಷ್ಠ ಒಂದು ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯನಿರತವಾಗಿದೆ.