ಮುದ್ದೇಬಿಹಾಳ, ಆ.18-ತಾಯಿಯ ನಿಧನದಿಂದ ಆಘಾತಗೊಂಡು ಮೂವರು ಸೋದರಿಯರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ನಡೆದಿದೆ.ಸ್ಮಿತಾ ನಾಯಕವಾಡಿ (28), ಜ್ಯೋತಿ (24) ಹಾಗೂ ಶ್ರುತಿ (18) ಎಂಬುವವರೇ ಆತ್ಮಹತ್ಯೆಗೆ ಯತ್ನಿಸಿದ ಸಹೋದರಿಯರಾಗಿದ್ದಾರೆ.ತಾಯಿಯ ನಿಧನದ ದುಃಖ ತಡೆಯಲಾರದೆ ಈ ಮೂವರು ಸಹೋದರಿಯರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.
ಹಿರಿಯ ಸಹೋದರಿ ಸ್ಮಿತಾ ಪ್ರಾಣಾಪಾಯದಿಂದ ಪಾರಾಗಿದ್ದು, ಜ್ಯೋತಿ ಹಾಗೂ ಶ್ರುತಿ ಅಸ್ವಸ್ಥಗೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಇವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಮುದ್ದೇಬಿಹಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸಿದ್ದಾರೆ.