ರಾಷ್ಟ್ರೀಯ

ವಿಕಲಾಂಗರಿಗೆ ವಿಶೇಷ ದ್ವಿಚಕ್ರ ವಾಹನ ವಿತರಿಸಿದ ರಾಹುಲ್ ಗಾಂಧಿ

Pinterest LinkedIn Tumblr

RAHULನವದೆಹಲಿ: ತಮ್ಮ ತಂದೆ, ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ 71ನೇ ಜನ್ಮದಿನದ ಸವಿನೆನಪಿಗಾಗಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಶನಿವಾರ 100 ವಿಕಲಾಂಗರಿಗೆ ಅನುಕೂಲಕರ ದ್ವಿಚಕ್ರವಾಹನಗಳನ್ನು ವಿತರಣೆ ಮಾಡಿದ್ದಾರೆ. ಆಗಸ್ಟ್ 20 ರಂದು ರಾಜೀವ್ ಗಾಂಧಿ ಜನ್ಮದಿನವಾಗಿತ್ತು.
100 ಜನರಿಗೆ ರಾಹುಲ್ ವಿಶೇಷ ದ್ವಿಚಕ್ರವಾಹನಗಳ ಕೀಯನ್ನು  ಹಸ್ತಾಂತರಿಸಿದರು. ಅದರಲ್ಲಿ ಹೆಚ್ಚಿನವರು 20 ರಿಂದ 30 ವರ್ಷದೊಳಗಿನವರಾಗಿದ್ದರು.  ಕೀ ವಿತರಿಸಿದ ಬಳಿಕ ಅವರ ಜತೆ ಬೆರತ ರಾಹುಲ್ ಯೋಗಕ್ಷೇಮ ಮತ್ತು ಭವಿಷ್ಯದ ಯೋಜನೆಗಳ ಕುರಿತು ವಿಚಾರಿಸಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮ ಸಂಘಟನಾಕಾರರು, ವಿಕಲಾಂಗರು ಸ್ವಾವಲಂಬಿಗಳಾಗುವಂತಾಗಬೇಕು ಎಂಬ ರಾಜೀವ್ ಕನಸನ್ನು ನೆನಪಿಸಿಕೊಂಡರು.

ವಿಕಲಾಂಗರ ಜತೆಗಿನ ಸಂವಹನದ ಸಮಯದಲ್ಲಿ ರಾಹುಲ್, ದೈಹಿಕ ನ್ಯೂನತೆಯ ನಡುವೆಯೂ ಪ್ರಭಾವಶಾಲಿ ಶೈಕ್ಷಣಿಕ ಅರ್ಹತೆ ಪಡೆದವರನ್ನು, ಅವರ ಕಠಿಣ ಶ್ರಮವನ್ನು ಕೊಂಡಾಡಿದರು.

ಪ್ರತಿವರ್ಷ ರಾಜೀವ್ ಗಾಂಧಿ ಫೌಂಡೇಶನ್ ವಿಕಲಾಂಗರಿಗೆ ಈ ರೀತಿಯಲ್ಲಿ ಸನ್ಮಾನಿಸುತ್ತದೆ. ರಾಹುಲ್ ಗಾಂಧಿ ಈ ಸಂಸ್ಥೆಯ ಟ್ರಸ್ಟಿಯಾಗಿದ್ದಾರೆ.

Write A Comment