ಕರ್ನಾಟಕ

ಬ್ರಾಂಡೆಡ್ ಶರ್ಟ್ ಮಾರುತ್ತಿದ್ದ ಸರ್ಕಾರಿ ನೌಕರರು ಅಂದರ್ !

Pinterest LinkedIn Tumblr

SHIRTಶಿವಮೊಗ್ಗ: ಸಾಮಾನ್ಯ ಶರ್ಟ್ ಗಳಿಗೆ ಬ್ರಾಂಡೆಡ್ ಕಂಪನಿಯ ಲೇಬಲ್ ಹಚ್ಚಿ ಮಾರಾಟ ಮಾಡುತ್ತಿದ್ದ ಜಾಲವನ್ನು ಭೇದಿಸಿರುವ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಅಚ್ಚರಿಯೆಂದರೆ ಬಂಧಿತರು ಸರ್ಕಾರಿ ನೌಕರರು. ಜಿಲ್ಲಾ ಕೈಗಾರಿಕಾ ತರಬೇತಿ ಕೇಂದ್ರದಲ್ಲಿಯೇ ಇವರು ಬ್ರಾಂಡೆಡ್ ಲೇಬಲ್ ಗಳನ್ನು ಹಚ್ಚುತ್ತಿದ್ದರು.

ಇಲ್ಲಿನ ಎಪಿಎಂಸಿ ಎದುರಿನ ಜಿಲ್ಲಾ ಕೈಗಾರಿಕಾ ತರಬೇತಿ ಕೇಂದ್ರದ ಪ್ರಾಂಶುಪಾಲ ಎನ್. ಎ. ಶೆಣೈ, ಸೂಪರ್ ವೈಸರ್ ಬಸವರಾಜ, ಮೈಕೆಲ್ ಕೆನ್ನಿತ್ ಬಂಧಿತ ಆರೋಪಿಗಳು. ಮತ್ತೊಬ್ಬ ಆರೋಪಿ ಜಾನ್ಸನ್ ಎಂಬಾತ ತಲೆಮರೆಸಿಕೊಂಡಿದ್ದಾನೆ. ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಪೀಟರ್ ಇಂಗ್ಲೆಂಡ್ ಕಂಪನಿಯ ನಕಲಿ ಲೇಬಲ್ ಅಂಟಿಸಿದ್ದ ವಿವಿಧ ಅಳತೆ ಫುಲ್ ಶರ್ಟ್ ದಾಳಿಯ ಸಂದರ್ಭದಲ್ಲಿ ದೊರೆತಿವೆ.

ಜಿಲ್ಲಾ ತರಬೇತಿ ಕೇಂದ್ರದಲ್ಲಿ ಮಹಿಳೆಯರಿಗೆ ಹೊಲಿಗೆ ತರಬೇತಿ ನೀಡುತ್ತಿದ್ದು, ಅವರಿಂದಲೇ ಶರ್ಟ್ ಗಳನ್ನು ಹೊಲೆಸಿ ಪ್ರತಿಷ್ಟಿತ ಕಂಪನಿ ಲೇಬಲ್ ಹಚ್ಚಿ, ನೀಟಾಗಿ ಪ್ಯಾಕ್ ಮಾಡಿ ಮಾರಾಟ ಮಾಡುತ್ತಿದ್ದರು.ಸುಮಾರು 200 ರೂ ಬೆಲೆಯ ಈ ಶರ್ಟ್ ಗಳನ್ನು 1000 ರೂ.ಗೆ ಮಾರುತ್ತಿದ್ದರು. ನಕಲಿ ಲೇಬಲ್ ಗಳನ್ನು ಬೆಂಗಳೂರು ಚಿಕ್ಕಪೇಟೆಯಿಂದ ತರುತ್ತಿದ್ದರು ಎನ್ನಲಾಗಿದೆ. ಈ ಸಂಬಂಧ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment