ರಂಗಕಲೆ ಪ್ರೋತ್ಸಾಹಿಸುವುದರ ಮೂಲಕ ನಮ್ಮ ದೇಶದ ಸಂಸ್ಕøತಿಯನ್ನು ಉಳಿಸಿ ಬೆಳೆಸಲು ಸಾದ್ಯ ಎಂದು ರೋಟರಿ ಜಿಲ್ಲೆ 3180 ವಿಭಾಗ 2 ಇದರ ಅಸಿಸ್ಟಂಟ್ ಗವರ್ನರ್ ರೊ. ಅಲೆನ್ ಲೂವಿಸ್‍ಇವರು ಹೇಳಿದರು. ಶ್ರೀಯುತರು ಇಂದು ಆಗಸ್ಟ್ 21, 2015ರ ಬಳಿಗ್ಗೆ ರೋಟರಿ ಕ್ಲಬ್ ಮಣಿಪಾಲ ಟೌನ್, ಮಣಿಪಾಲ ಇದರ ಪ್ರಾಯೋಜಕತ್ವದಲ್ಲಿ ಪಳ್ಳಿ ಶ್ರೀನಿವಾಸ ಹೆಗ್ಡೆ ಚಾರಿಟೇಬಲ್ ಟ್ರಸ್ಟ್, ಕೋಟ್ನಕಟ್ಟೆ ಫ್ರೆಂಡ್ಸ್ ಸರ್ಕಲ್-ಹಿರಿಯಡಕ, ರಂಗಚಿನ್ನಾರಿ-ಕಾಸರಗೋಡು ಮತ್ತು ರಂಗಭೂಷಣ-ಮಣಿಪಾಲ ಇವರುಗಳ ಸಹಯೋಗದೊಂದಿಗೆ ಖ್ಯಾತ ರಂಗನಟ/ನಿರ್ದೇಶಕ ಕಾಸರಗೋಡು ಚಿನ್ನಾ ಇವರ ನಿರ್ದೇಶನದಲ್ಲಿ ‘ರಂಗ ಸಂಸ್ಕøತಿ’ ಕಾರ್ಯಾಗಾರದ ಉದ್ಘಾಟನೆಗೈಯುತ್ತಾ ಮಾತನಾಡುತಿದ್ದರು.
ಕಾರ್ಯಾಗಾರವನ್ನು ಸ.ಪ.ಪೂ ಕಾಲೇಜು, ಹಿರಿಯಡಕ ಇದರ ಪ್ರೌಢ ಶಾಲಾ ಮಕ್ಕಳಿಗಾಗಿ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಕಾಸರಗೋಡು ಚಿನ್ನಾ ಇವರು ಮಾತನಾಡುತ್ತಾ “ರಂಗಭೂಮಿ ಜೀವನದ ಒಂದು ಅಂಶ ಅದನ್ನು ತಳಮಟ್ಟದಿಂದ ಅಭ್ಯಸಿಸಿದಾಗ ಕಲಾವಿದನಾಗಿ ರೂಪುಗೊಳ್ಳುತ್ತಾನೆ. ಅದಕ್ಕಾಗಿ ಶಾಲಾಮಟ್ಟದಲ್ಲಿ ರಂಗ ಸಂಸ್ಕೃತಿ ಯನ್ನು ಪ್ರೋತ್ಸಾಹಿಸುವುದು ಉತ್ತಮ” ಎಂದು ಹೇಳಿದರು.
ರೋಟರಿ ಕ್ಲಬ್ ಮಣಿಪಾಲ ಟೌನ್‍ನ ಅಧ್ಯಕ್ಷರಾದ ರೊ. ಡಾ. ಸೇಸಪ್ಪ ಎ ರೈ ಇವರ ಅಧ್ಯಕ್ಷತಯಲ್ಲಿ ನಡೆದ ಈ ಸಮಾರಂಭದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಶಾರದಾ ಎ, ಕೋಟ್ನಕಟ್ಟೆ ಫ್ರೆಂಡ್ಸ್ ಸರ್ಕಲ್‍ನ ಅಧ್ಯಕ್ಷರಾದ ದಿವಾಕರ ಭಂಡಾರಿ ಇವರುಗಳು ಮುಖ್ಯ ಅತಿಥಿಗಳಾಗಿದ್ದರು. ಸಭೆಯಲ್ಲಿ ರೋಟರಿ ಜಿಲ್ಲಾ ಗವರ್ನರ್ ರೊ. ಡಾ. ಭರತೇಶ್ ಆದಿರಾಜ್, ಇದೇ ಕಾಲೇಜಿನ ಪ್ರಾಂಶುಪಾಲ ರಂಗನಾಥ ಭಟ್, ರೋಟರಿ ಜಿಲ್ಲಾ ಸರ್ಜಂಟ್ ಪ್ರಸನ್ನ ಶೆಟ್ಟಿ ಇವರುಗಳು ಉಪಸ್ಥಿತರಿದ್ದರು.
ದೇವದಾಸ ಮರಾಠೆ ಸ್ವಾಗತಗೈದು, ವಿದ್ಯಾರ್ಥಿಗಳಾದ ಶತ ಮತ್ತು ಸಂಗಡಿಗರು ಪ್ರಾರ್ಥನೆಗೈದರು. ಸಿ.ಎಫ್ ರೋಡ್ರಿಗಸ್ ಧನ್ಯವಾದ ಸಮರ್ಪಿಸಿ, ಸಚ್ಚಿದಾನಂದ ನಾಯಕ್ ಕಾರ್ಯಕ್ರಮವನ್ನು ನಿರೂಪಿಸಿದರು. ಮೋಹನ್ ಕಡಬ, ಶ್ರೀಕಾಂತ್ ಉಪಾಧ್ಯ, ತನುಜಾ ಮೆಬೆನ್, ಗುರುನಾಥ ಶೆಟ್ಟಿ ಇವರುಗಳು ಸಹಕರಿಸಿದರು. ರಾಘವೇಂದ್ರ ಜಿ ಹಿರಿಯಡಕ ಇವರು ಕಾರ್ಯಾಗಾರದ ಸಂಚಾಲಕÀರಾಗಿದ್ದರು.